ADVERTISEMENT

ವಲಸೆ: ಭಾರತ ಸೇರಿ 7 ದೇಶ ‘ಸುರಕ್ಷಿತ’– ಐರೋಪ್ಯ ಒಕ್ಕೂಟ

ಏಜೆನ್ಸೀಸ್
Published 16 ಏಪ್ರಿಲ್ 2025, 14:35 IST
Last Updated 16 ಏಪ್ರಿಲ್ 2025, 14:35 IST
..
..   

ಬ್ರುಸೆಲ್ಸ್(ಬೆಲ್ಜಿಯಂ): ಯುರೋಪ್‌ ರಾಷ್ಟ್ರಗಳಿಗೆ ವಲಸೆ ಬರುವವರ ವಿಚಾರಕ್ಕೆ ಸಂಬಂಧಿಸಿ ಭಾರತ ಸೇರಿ 7 ‘ಸುರಕ್ಷಿತ ದೇಶ’ಗಳ ಹೆಸರು ಇರುವ ಪಟ್ಟಿಯನ್ನು ಐರೋಪ್ಯ ಒಕ್ಕೂಟ ಬುಧವಾರ ಪ್ರಕಟಿಸಿದೆ.  

ಭಾರತ, ಕೊಸೋವೊ, ಬಾಂಗ್ಲಾದೇಶ, ಕೊಲಂಬಿಯಾ, ಈಜಿಪ್ಟ್, ಮೊರಾಕ್ಕೊ ಮತ್ತು ಟುನೀಷಿಯಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಲಸಿಗರನ್ನು ವಾಪಸ್ ಕಳಿಸುವ ಪ್ರಕ್ರಿಯೆಗೆ ವೇಗ ನೀಡುವ ಸಲುವಾಗಿ ಒಕ್ಕೂಟ ಈ ಪಟ್ಟಿಯನ್ನು ಸಿದ್ಧಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT