ADVERTISEMENT

ಕೋವಿಡ್‌: ಐರೋಪ್ಯ ಒಕ್ಕೂಟದಿಂದ ‘ಸಿನೊವ್ಯಾಕ್‌’ ಪರಿಶೀಲನೆ ಆರಂಭ

ಚೀನಾ ಉತ್ಪಾದಿತ ಲಸಿಕೆಯ ಕಾರ್ಯಕ್ಷಮತೆ ಪರಾಮರ್ಶೆ

ಏಜೆನ್ಸೀಸ್
Published 4 ಮೇ 2021, 14:39 IST
Last Updated 4 ಮೇ 2021, 14:39 IST
ಸಿನೊವ್ಯಾಕ್‌ ಲಸಿಕೆ
ಸಿನೊವ್ಯಾಕ್‌ ಲಸಿಕೆ   

ದಿ ಹೇಗ್‌: ಚೀನಾ ಉತ್ಪಾದಿಸಿರುವ ಕೋವಿಡ್‌ ಲಸಿಕೆ ‘ಸಿನೊವ್ಯಾಕ್‌’ ಎಷ್ಟು ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದರ ಕುರಿತು ಪರಿಶೀಲನಾ ಕಾರ್ಯ ಆರಂಭಿಸಲಾಗಿದೆ ಐರೋಪ್ಯ ಒಕ್ಕೂಟದ (ಇಯು) ಔಷಧ ನಿಯಂತ್ರಕ ಸಂಸ್ಥೆ ಮಂಗಳವಾರ ಹೇಳಿದೆ.

‘ಯುರೋಪಿಯನ್‌ ಮೆಡಿಸಿನ್ಸ್‌ ಏಜೆನ್ಸಿ’ (ಇಎಂಎ) ಎಂಬ ಸಂಸ್ಥೆ ಈ ಪರಿಶೀಲನಾ ಕಾರ್ಯ ನಡೆಯಲಿದೆ. ಒಕ್ಕೂಟದಲ್ಲಿ 27 ಸದಸ್ಯ ರಾಷ್ಟ್ರಗಳಿವೆ. ಚೀನಾ ಉತ್ಪಾದಿತ ಈ ಲಸಿಕೆಯ ಬಳಕೆಗೆ ಅನುಮೋದನೆ ನೀಡುವ ಮೊದಲು ಪರಿಶೀಲನೆಗೆ ಒಕ್ಕೂಟ ಮುಂದಾಗಿದೆ.

‘ಪ್ರಯೋಗಾಲಯ ಹಾಗೂ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಕಂಡು ಬಂದ ಸಿನೊವ್ಯಾಕ್‌ ಲಸಿಕೆಯ ಕಾರ್ಯಕ್ಷಮತೆಯ ವರದಿಗಳ ಆಧಾರದ ಮೇಲೆ ಪರಿಶೀಲನೆ ನಡೆಸಲಾಗುವುದು. ಆದರೆ, ಈ ಲಸಿಕೆಯನ್ನು ಮಾರಾಟ ಮಾಡುವುದನ್ನು ದೃಢೀಕರಿಸುವಂತೆ ಕೋರಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ’ ಎಂದು ಇಎಂಎ ತಿಳಿಸಿದೆ.

ADVERTISEMENT

‘ಸಿನೊವ್ಯಾಕ್‌ ಲಸಿಕೆ ಎಷ್ಟು ಪರಿಣಾಮಕಾರಿ ಹಾಗೂ ಅಡ್ಡಪರಿಣಾಮಗಳ ಪ್ರಮಾಣ ಕುರಿತು ತಜ್ಞರು ಮೌಲ್ಯಮಾಪನ ಮಾಡುವರು. ಅದರ ಅನುಮೋದನೆಗೆ ಅಗತ್ಯವಿರುವಷ್ಟು ಪುರಾವೆಗಳು ಸಿಕ್ಕರಷ್ಟೇ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ದೃಢೀಕರಿಸಲಾಗುವುದು’ ಎಂದೂ ಸಂಸ್ಥೆ ಹೇಳಿದೆ. ಆದರೆ, ಅನುಮೋದನೆಗೆ ಯಾವುದೇ ಕಾಲಮಿತಿ ಇಲ್ಲ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.