
ಶಾಹ್ ಮಹಮೂದ್ ಖುರೇಷಿ
ಲಾಹೋರ್: ‘ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ತೆಹ್ರೀಕ್–ಎ–ಇನ್ಸಾಫ್ ಪಕ್ಷದ ಹಿರಿಯ ಉಪಾಧ್ಯಕ್ಷ ಶಾಹ್ ಮಹಮೂದ್ ಖುರೇಷಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಲ್ಲ ಎಂದು ಪಾಕಿಸ್ತಾನದ ಚುನಾವಣಾ ಮೇಲ್ಮನವಿ ನ್ಯಾಯಮಂಡಳಿ ಹೇಳಿದೆ’ ಎಂದು ದಿ ನ್ಯೂಸ್ ಇಂಟರ್‌ನ್ಯಾಷನಲ್ ಭಾನುವಾರ ವರದಿ ಮಾಡಿವೆ.
‘ತಮ್ಮ ನಾಮಪತ್ರವನ್ನು ತಿರಸ್ಕಾರ ಮಾಡಿದ್ದನ್ನು ಪ್ರಶ್ನಿಸಿ ಖುರೇಷಿ ಅವರು ಸಲ್ಲಿಸಿದ್ದ ಮನವಿಯನ್ನು ಚುನಾವಣಾ ಮೇಲ್ಮನವಿ ನ್ಯಾಯಮಂಡಳಿ ಶನಿವಾರ ತಿರಸ್ಕರಿಸಿದೆ’ ಎಂದು ಅದು ಹೇಳಿದೆ.
ಸಿಂಧ್‌ನ ಉಮರ್‌ಕೋಟ್ ನಗರದ ಎನ್‌ಎ–214 ಕ್ಷೇತ್ರದಿಂದ ಸ್ಪರ್ಧಿಸಲು ಖುರೇಷಿ ಅವರು ಈಗಾಗಲೇ ಅನುಮತಿ ಪಡೆದಿದ್ದರು. ಆದರೆ, ನ್ಯಾಯಮಂಡಳಿಯ ನಿರ್ಧಾರದಿಂದ ಖುರೇಷಿ ಅವರಿಗೆ ಸ್ಪರ್ಧಿಸಲು ಸಾಧ್ಯವಿಲ್ಲದಂತಾಗಿದೆ. ಪ್ರಸ್ತುತ, ಖುರೇಷಿ ಅವರು ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಆರೋಪ ಕುರಿತ ಪ್ರಕರಣದಕ್ಕೆ (ಸೈಫರ್) ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.