ADVERTISEMENT

ಆಫ್ರಿಕಾ ಗಣರಾಜ್ಯದ ರಾಜಧಾನಿಯಲ್ಲಿ ಸ್ಫೋಟ, ಕಾಲ್ತುಳಿತ: 29 ವಿದ್ಯಾರ್ಥಿಗಳು ಸಾವು

ಎಪಿ
Published 26 ಜೂನ್ 2025, 14:47 IST
Last Updated 26 ಜೂನ್ 2025, 14:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಂಗುಯಿ: ಮಧ್ಯ ಆಫ್ರಿಕಾ ಗಣರಾಜ್ಯದ ರಾಜಧಾನಿಯ ಪ್ರೌಢಶಾಲೆಯೊಂದರಲ್ಲಿ ಸಂಭವಿಸಿದ ಸ್ಫೋಟ ಮತ್ತು ಕಾಲ್ತುಳಿತದಲ್ಲಿ ಕನಿಷ್ಠ 29 ವಿದ್ಯಾರ್ಥಿಗಳು ಮೃತಪಟ್ಟು, 260ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಾಂಗುಯಿ ನಗರದ ಬರ್ತೆಲೆಮಿ ಬೊಗಾಂಡ ಪ್ರೌಢಶಾಲೆ ಆವರಣದಲ್ಲಿದ್ದ ವಿದ್ಯುತ್ ಪರಿವರ್ತಕಕ್ಕೆ ಬುಧವಾರ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಸ್ಫೋಟಗೊಂಡಿತು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲೆಯಲ್ಲಿ ಅಂದಾಜು 5,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ದಿಕ್ಕೆಟ್ಟು ಓಡಿದಾಗ ಕಾಲ್ತುಳಿತ ಉಂಟಾಗಿದೆ. ಸತ್ತವರಲ್ಲಿ 16 ವಿದ್ಯಾರ್ಥಿನಿಯರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.