ADVERTISEMENT

2500 ಸೈನಿಕರು ರಷ್ಯಾಗೆ ಶರಣು: ಭವಿಷ್ಯದ ಬಗ್ಗೆ ಆತಂಕ

ಮರಿಯುಪೊಲ್‌ ಅಜೋವ್‌ಸ್ಟಾಲ್‌ ಉಕ್ಕು ಸ್ಥಾವರದಲ್ಲಿದ್ದ ಉಕ್ರೇನ್‌ ಸೈನಿಕರು

ಏಜೆನ್ಸೀಸ್
Published 22 ಮೇ 2022, 11:28 IST
Last Updated 22 ಮೇ 2022, 11:28 IST
ಸಾಂದರ್ಭಿಕ ಚಿತ್ರ –ಎಎಫ್‌ಪಿ
ಸಾಂದರ್ಭಿಕ ಚಿತ್ರ –ಎಎಫ್‌ಪಿ   

ಪೋಕ್ರೊವ್‌ಸ್ಕ್‌ (ಉಕ್ರೇನ್‌) (ಎಪಿ): ವಶಕ್ಕೆ ಪಡೆದ ಮರಿಯುಪೊಲ್‌ ಅಜೋವ್‌ಸ್ಟಾಲ್‌ ಉಕ್ಕು ಸ್ಥಾವರದಿಂದ 2,500 ಉಕ್ರೇನ್‌ ಸೈನಿಕರು ಶರಣಾಗಿದ್ದಾರೆ ಎಂದು ರಷ್ಯಾ ತಿಳಿಸಿದೆ.

ಈ ಬೆನ್ನಲ್ಲೇ ಇವರನ್ನು ‘ಯುದ್ಧ ಕೈದಿ’ಗಳೆಂದು ಘೋಷಿಸಿ ಅವರನ್ನು ಬಿಡುಗಡೆಮಾಡುವಂತೆ ಸೈನಿಕರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಉಕ್ರೇನ್‌ ಸರ್ಕಾರ ಸಹ ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದೆ.ಆದರೆಬಂಧಿತರು ನ್ಯಾಯಮಂಡಳಿಯಿಂದ ವಿಚಾರಣೆ ಒಳಪಟ್ಟು ನಂತರವೇ ಬಿಡುಗಡೆಯಾಗಬೇಕು ಎಂದು ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಬಂಧಿತ ಸೈನಿಕರ ಭವಿಷ್ಯ ಏನು ಎಂಬ ಆತಂಕ ಸೃಷ್ಟಿಯಾಗಿದೆ.

ಆಯಕಟ್ಟಿನ ಮರಿಯುಪೊಲ್‌ ಬಂದರು ನಗರ ವಶಕ್ಕೆ ಮೂರು ತಿಂಗಳುಗಳಿಂದ ಹರಸಾಹಸ ಪಡುತ್ತಿದ್ದ ರಷ್ಯಾ ಕೊನೆಗೂ ಅದನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಇದು ರಷ್ಯಾಗೆ ಲಭಿಸಿರುವ ಮಹತ್ವದ ಗೆಲುವು ಎಂದೇ ಬಣ್ಣಿಸಲಾಗಿದೆ. ಆದರೆ ನಗರದಲ್ಲಿರುವ 20,000 ನಿವಾಸಿಗಳು ಜೀವಭಯದಲ್ಲಿ ಬದುಕುತ್ತಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಡೊನ್‌ಬಾಸ್‌ನಲ್ಲಿ ಪರಿಸ್ಥಿತಿ ಗಂಭೀರ:

ಪೂರ್ವ ಉಕ್ರೇನಿನ ಡೊನ್‌ಬಾಸ್‌ನಲ್ಲಿ ಉಕ್ರೇನ್‌ ಮತ್ತು ರಷ್ಯಾ ಸೈನಿಕರು ತೀವ್ರ ಹೋರಾಟ ನಡೆಸುತ್ತಿದ್ದು, ಡೊನ್‌ಬಾಸ್‌ ಪರಿಸ್ಥಿತಿ ಕ್ಲಿಷ್ಟಕರವಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.