ADVERTISEMENT

ಉತ್ತರ ಮೆಸಿಡೋನಿಯಾ: ಕೋವಿಡ್‌ ಆಸ್ಪತ್ರೆಯಲ್ಲಿ ಅಗ್ನಿ ದುರಂತ, 14 ಮಂದಿ ಸಾವು

ಏಜೆನ್ಸೀಸ್
Published 9 ಸೆಪ್ಟೆಂಬರ್ 2021, 8:51 IST
Last Updated 9 ಸೆಪ್ಟೆಂಬರ್ 2021, 8:51 IST
ಉತ್ತರ ಮೆಸಿಡೊನಿಯಾ ದೇಶದ ಟೆಟೊವೊ ಪಟ್ಟಣದ ಕೋವಿಡ್‌ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಅಗ್ನಿದುರಂತದಿಂದ ಸುಟ್ಟು ಹೋಗಿರುವ ಪರಿಕರಗಳನ್ನು ವಿಲೇವಾರಿ ಮಾಡುತ್ತಿರುವ ಸಿಬ್ಬಂದಿ
ಉತ್ತರ ಮೆಸಿಡೊನಿಯಾ ದೇಶದ ಟೆಟೊವೊ ಪಟ್ಟಣದ ಕೋವಿಡ್‌ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಅಗ್ನಿದುರಂತದಿಂದ ಸುಟ್ಟು ಹೋಗಿರುವ ಪರಿಕರಗಳನ್ನು ವಿಲೇವಾರಿ ಮಾಡುತ್ತಿರುವ ಸಿಬ್ಬಂದಿ   

ಸ್ಕೊಪ್ಜೆ(ಉತ್ತರ ಮೆಸಿಡೊನಿಯಾ ಗಣರಾಜ್ಯ): ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಉತ್ತರ ಮೆಸಿಡೋನಿಯಾದ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಾಲ್ಕನ್ ದೇಶದ ವಾಯವ್ಯದಲ್ಲಿರುವ ಟೆಟೊವೊ ಪಟ್ಟಣದ ಕೋವಿಡ್‌ ಕೇಂದ್ರದಲ್ಲಿ ಬುಧವಾರ ರಾತ್ರಿ ಬಹುದೊಡ್ಡ ಅಗ್ನಿ ದುರಂತವೊಂದು ‌ಸಂಭವಿಸಿದೆ. ಸ್ಫೋಟದಿಂದ ಸಂಭವಿಸಿರುವ ಈ ಅವಘಡದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ‘ ಎಂದು ಪ್ರಧಾನಿ ಜೊರನ್ ಝಯೇವ್‌ ಟ್ವೀಟ್‌ ಮಾಡಿದ್ದಾರೆ.

‘ಈ ಅಗ್ನಿ ದುರಂತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ‘ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‌‌

ADVERTISEMENT

‘ಬೆಂಕಿ ಅವಘಡದಲ್ಲಿ ಮೃತಪಟ್ಟವರ ಗುರುತು ಪತ್ತೆಗಾಗಿ ಶವಪರೀಕ್ಷೆ ನಡೆಸುವಂತೆ ಆದೇಶಿಸಲಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸಚಿವ ವೆಂಕೊ ಫಿಲಿಪ್ಸ್ ಸಂತ್ರಸ್ತ ಕುಟುಂಬಗಳಿಗೆ ಟ್ವೀಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಆಸ್ಪತ್ರೆಯ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಮಾಡ್ಯುಲಾರ್ ಘಟಕಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.