ADVERTISEMENT

ಕ್ಯಾಲಿಫೋರ್ನಿಯ ದೋಣಿ ದುರಂತ, ಭಾರತೀಯ ದಂಪತಿ ದುರ್ಮರಣ

ಏಜೆನ್ಸೀಸ್
Published 5 ಸೆಪ್ಟೆಂಬರ್ 2019, 11:51 IST
Last Updated 5 ಸೆಪ್ಟೆಂಬರ್ 2019, 11:51 IST
   

ಕ್ಯಾಲಿಫೋರ್ನಿಯಾ:ಸಾಂತಾ ಕ್ರುಸ್ ದ್ವೀಪದಪ್ರವಾಸ ದೋಣಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ ಪರಿಣಾಮಭಾರತೀಯ ಮೂಲದ ದಂಪತಿ ಸೇರಿದಂತೆ 34 ಮಂದಿ ಪ್ರವಾಸಿಗರು ಸಾವಿಗೀಡಾಗಿದ್ದಾರೆ.

ನಾಗಪುರ ಮೂಲದ ವೈದ್ಯ ಡಿಯೋಪುಜಾರಿ ಅವರ ಪುತ್ರಿ ಸಂಜೀರಿ ಡಿಯೋಪುಜಾರಿ ಹಾಗೂ ಇವರ ಪತಿ ಕೌಸ್ತುಭ ನಿರ್ಮಲ್ ಮೃತಪಟ್ಟವರು.ಸೋಮವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ.

ಮೃತದಂಪತಿ ಭಾರತದಿಂದ ವಲಸೆ ಹೋಗಿ ಕ್ಯಾಲಿಫೋರ್ನಿಯಾದಲ್ಲಿಯೇ ನೆಲೆಸಿದ್ದರು. ಸಾಂತಾ ಕ್ರುಸ್‌ನಲ್ಲಿ ಪ್ರವಾಸಕ್ಕೆ ತೆರಳಿ ವಾಪಸಾಗುತ್ತಿದ್ದಾಗಬೆಳಗಿನ ಜಾವವಾದ ಪರಿಣಾಮ ಎಲ್ಲರೂ ನಿದ್ರೆಯಲ್ಲಿದ್ದರು. ಈ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜ್ವಾಲೆ ಸಂಪೂರ್ಣ ಆವರಿಸಿಕೊಂಡಾಗಪ್ರವಾಸಿಗರು ನಿದ್ರೆಯಿಂದ ಎಚ್ಚರಗೊಂಡರೂ ನೀರಿನ ಮಧ್ಯೆ ಇದ್ದ ಪರಿಣಾಮ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದರು. ಇದರಿಂದಾಗಿ34 ಮಂದಿಯೂ ಸಾವಿಗೀಡಾಗಿದ್ದಾರೆ.ಕೇವಲ ಒಬ್ಬರ ದೇಹ ಮಾತ್ರ ಅರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಉಳಿದವರ ದೇಹಗಳು ಬೆಂಕಿಗೆ ಸಂಪೂರ್ಣ ಸುಟ್ಟು ಕರಕಲಾಗಿವೆಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ADVERTISEMENT

ಡಿಯೋಪುಜಾರಿ ಅವರ ಮತ್ತೊಬ್ಬ ಪುತ್ರಿ ಅಮೆರಿಕಾದಲ್ಲಿ ವಾಸವಾಗಿದ್ದು, ಈ ಘಟನೆ ಕುರಿತು ಭಾರತದಲ್ಲಿರುವ ಮೃತರ ಕುಟುಂಬಕ್ಕೆ ಸಾವಿನ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದಿಲ್ಲ ಎನ್ನಲಾಗಿದೆ. ಶವಗಳು ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿರುವ ಕಾರಣ ಕ್ಯಾಲಿಫೋರ್ನಿಯಾದ ಪೊಲೀಸರುಮಹಜರು ನಡೆಸಿದ್ದು, ಅವರ ವಾರಸುದಾರರಿಗೆ ನೀಡಲು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.