ADVERTISEMENT

ಶಾರ್ಜಾ| ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ, 7 ಜನರಿಗೆ ಗಾಯ

ರಾಯಿಟರ್ಸ್
Published 6 ಮೇ 2020, 1:23 IST
Last Updated 6 ಮೇ 2020, 1:23 IST
ಹೊತ್ತಿ ಉರಿಯುತ್ತಿರುವ ಕಟ್ಟಡ  (ಕೃಪೆ: ಏಜೆನ್ಸೀಸ್)
ಹೊತ್ತಿ ಉರಿಯುತ್ತಿರುವ ಕಟ್ಟಡ (ಕೃಪೆ: ಏಜೆನ್ಸೀಸ್)   

ದುಬೈ :ಸಂಯುಕ್ತ ಅರಬ್ ರಾಷ್ಟ್ರ (ಯುಎಇ)ಯ ಶಾರ್ಜಾದಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಮಂಗಳವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಏಳು ಮಂದಿಗೆ ಗಾಯಗಳಾಗಿವೆ.

ಶಾರ್ಜಾದ ಅಲ್ ನಹದಾ ಪ್ರದೇಶದಲ್ಲಿ ವಸತಿ ಸಮುಚ್ಛಯವಿರುವ ಅಬ್ಕೊ ಟವರ್ ಹೊತ್ತಿ ಉರಿದಿದ್ದು, ಏಳು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಅವರನ್ನು ಹತ್ತಿರರ ಆಸ್ಪತ್ರೆಗೆ ದಾಖಲಾಗಿಸಿದೆ ಎಂದು ಶಾರ್ಜಾ ಸರ್ಕಾರದ ಮಾಧ್ಯಮ ಕಚೇರಿ ಟ್ವೀಟ್ ಮಾಡಿದೆ.


ಅಲ್ಲಿರುವ ಜನರನ್ನು ಸ್ಥಳಾಂತರಿಸಿದ್ದು ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.