ಟೋಕಿಯೊ: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ(ಐಎಸ್‌ಎಸ್) ಬುಧವಾರ ಸರಕು ಹೊತ್ತೊಯ್ಯಲು ಸಿದ್ಧವಾಗಿದ್ದ ರಾಕೆಟ್‌ನ ಉಡಾವಣೆಯನ್ನು, ಜಪಾನ್ ಬಾಹ್ಯಾಕಾಶ ಸಂಸ್ಥೆ ರದ್ದುಗೊಳಿಸಿದೆ.
ಮಿತ್ಸುಬಿಷಿ ಬೃಹತ್ ಕೈಗಾರಿಕೆ(ಎಂಎಚ್‌ಐ)ರಾಕೆಟ್ ಉಡಾವಣೆಗೆ ಸಿದ್ಧವಾಗುತ್ತಿದ್ದಂತೆಯೇ,ಉಡಾವಣಾ ಸ್ಥಳದ ಸಮೀಪದಲ್ಲೇ ಬೆಂಕಿ ಅವಘಡ ಸಂಭವಿಸಿತ್ತು. ‘ಅವಘಡದಿಂದ ರಾಕೆಟ್ ಮತ್ತು ಉಡಾವಣಾ ಕೇಂದ್ರಕ್ಕೆ ಹಾನಿಯಾಗಿದೆಯೆ ಎನ್ನುವುದನ್ನು ಪರೀಕ್ಷಿಸಲಾಗುತ್ತಿದೆ’ ಎಂದು ಎಂಎಚ್‌ಐ ತಿಳಿಸಿದೆ. ಗಗನಯಾತ್ರಿಗಳಿಗೆ ಆಹಾರ, ಕುಡಿಯುವ ನೀರು, ಸಂಶೋಧನಾ ಉಪಕರಣಗಳು ಸೇರಿದಂತೆ ಅಂದಾಜು 5.3 ಟನ್ ಸರಕು ರಾಕೆಟ್ ಒಳಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.