ADVERTISEMENT

ಆಮ್‌ಸ್ಟರ್‌ಡ್ಯಾಂನಲ್ಲಿ ವ್ಯಕ್ತಿಯೊಬ್ಬನಿಂದ ಚಾಕು ಇರಿತ: ಐವರಿಗೆ ಗಾಯ

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಅಮ್‌ಸ್ಟರ್‌ಡ್ಯಾಂ ನಗರ ಪೊಲೀಸರು ಹೇಳಿದ್ದಾರೆ.

ಏಜೆನ್ಸೀಸ್
Published 28 ಮಾರ್ಚ್ 2025, 12:49 IST
Last Updated 28 ಮಾರ್ಚ್ 2025, 12:49 IST
<div class="paragraphs"><p>ಚಾಕು</p></div>

ಚಾಕು

   

(ಸಾಂದರ್ಭಿಕ ಚಿತ್ರ)

ಆಮ್‌ಸ್ಟರ್‌ಡ್ಯಾಂ, ನೆದರ್ಲೆಂಡ್ಸ್: ಯುರೋಪ್‌ನ ನೆದರ್ಲೆಂಡ್ಸ್ ರಾಜಧಾನಿ ಆಮ್‌ಸ್ಟರ್‌ಡ್ಯಾಂನಲ್ಲಿ ವ್ಯಕ್ತಿಯೊಬ್ಬ ಮಾರುಕಟ್ಟೆ ಪ್ರದೇಶದಲ್ಲಿ ದಾಳಿ ಮಾಡಿ ಮನಸೋಇಚ್ಛೆ ಚಾಕು ಇರಿದು ಐವರನ್ನು ಗಾಯಗೊಳಿಸಿರುವ ಘಟನೆ ಗುರುವಾರ ನಡೆದಿದೆ.

ADVERTISEMENT

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಅಮ್‌ಸ್ಟರ್‌ಡ್ಯಾಂ ನಗರ ಪೊಲೀಸರು ಹೇಳಿದ್ದಾರೆ.

ನಗರದ ಹೃದಯಭಾಗವಾದ ಡ್ಯಾಂ ಸೆಂಟ್ರಲ್ ಸ್ಕ್ವೇರ್‌ನಲ್ಲಿ ಈ ದುರ್ಘಟನೆ ನಡೆದಿದೆ. ಚಾಕು ಇರಿದ ವ್ಯಕ್ತಿಯ ಮೇಲೆ ಸ್ಥಳದಲ್ಲಿದ್ದ ಕೆಲವರು ಪ್ರತಿರೋಧ ತೋರಿಸಿ ಆತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.

ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿ ನಡೆಸಲು ಕಾರಣ ಏನು ಎಂಬುದು ಹಾಗೂ ಆತನ ಗುರುತು ಪತ್ತೆ ತಿಳಿದು ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.