ADVERTISEMENT

ಕಾರ್ಮಿಕರ ಕೊರತೆ: ಅಮೆರಿಕದಲ್ಲಿ 1,500 ವಿಮಾನಗಳ ಸಂಚಾರ ರದ್ದು

ಏಜೆನ್ಸೀಸ್
Published 17 ಜೂನ್ 2022, 14:27 IST
Last Updated 17 ಜೂನ್ 2022, 14:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿ ಗುರುವಾರ ಸುಮಾರು 1,500ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ಅಲ್ಲಿನವಿಮಾನಯಾನ ಸಂಸ್ಥೆಗಳು ರದ್ದು ಮಾಡಿವೆ.

ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಮೂರನೇ ಒಂದು ಭಾಗದಷ್ಟು ಹಾಗೂನ್ಯೂಜೆರ್ಸಿ ಬಳಿಯ ನೆವಾರ್ಕ್ ಲಿಬರ್ಟಿ ವಿಮಾನ ನಿಲ್ದಾಣದಲ್ಲಿ ನಾಲ್ಕನೇ ಒಂದು ಭಾಗದಷ್ಟು ವಿಮಾನಯಾನವನ್ನು ರದ್ದುಗೊಳಿಸಲಾಗಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿದೆ. ಆದರೆವಿಮಾನಯಾನ ಸಂಸ್ಥೆಗಳು ಪೈಲಟ್‌ಗಳೂ ಸೇರಿದಂತೆ ಕಾರ್ಮಿಕರ ಕೊರತೆ ಎದುರಿಸುತ್ತಿವೆ. ಈ ಕಾರಣಗಳಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಯೋಜಿತ ವಿಮಾನಗಳ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆದರೆ ನೈರುತ್ಯ ಅಮೆರಿಕದ ಪೈಲಟ್‌ಗಳ ಒಕ್ಕೂಟವಾದ ಡೆಲ್ಟಾ, ವಿಮಾನಯಾನ ಸಂಸ್ಥೆಗಳು ನಿವೃತ್ತ ಸಿಬ್ಬಂದಿಯ ಹುದ್ದೆ ಭರ್ತಿಗೆ ಕ್ರಮ ತೆಗೆದುಕೊಳ್ಳದಿರುವುದು ಅಥವಾಕೋವಿಡ್‌ ಸಂದರ್ಭದಲ್ಲಿ ರಜೆ ತೆಗೆದುಕೊಂಡ ಸಿಬ್ಬಂದಿಯ ಜಾಗಕ್ಕೆ ಪರ್ಯಾಯ ಸಿಬ್ಬಂದಿಯನ್ನು ನಿಯೋಜಿಸದಿರುವುದರಿಂದ ವಿಮಾನಗಳ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.