ADVERTISEMENT

ಮಾಲಿಯಲ್ಲಿ ಅಲ್‌ ಖೈದಾ ಕಮಾಂಡರ್‌ ಹತ್ಯೆ

ಏಜೆನ್ಸೀಸ್
Published 23 ಫೆಬ್ರುವರಿ 2019, 11:36 IST
Last Updated 23 ಫೆಬ್ರುವರಿ 2019, 11:36 IST

ಬಾಮಾಕೊ: ಫ್ರೆಂಚ್‌ ಸೇನಾ ಪಡೆ ಮಾಲಿಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್‌ ಖೈದಾ ಇಸ್ಲಾಮಿಕ್ ಮಘ್ರೆಬ್‌ (ಎಕ್ಯೂಐಎಂ) ಉಗ್ರ ಸಂಘಟನೆ ಮುಖ್ಯಸ್ಥಡಜೆಲ್ ಒಕಾಶಾ ಮೃತಪಟ್ಟಿದ್ದಾನೆ.

ಡ್ರೋನ್‌ ಮತ್ತು ಹೆಲಿಕಾಪ್ಟರ್‌ ದಾಳಿಯಲ್ಲಿ ಒಟ್ಟು ಹನ್ನೊಂದು ಭಯೋತ್ಪಾದಕರು ಮೃತರಾಗಿದ್ದಾರೆ.

ಡಜೆಲ್ ಒಕಾಶಾ ಅಲಿಯಾಸ್‌ ಎಲ್‌ ಹಮೇಮ್‌ ಹಲವು ಭಯೋತ್ಪಾದಕ ಕೃತಗಳ ರೂವಾರಿಯಾಗಿದ್ದ. ಅಲ್ಜೀರಿಯಾ ಪ್ರಾಂತ್ಯದ ಮುಖ್ಯಸ್ಥನಾಗಿದ್ದ ಈತ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ.

ADVERTISEMENT

ಉತ್ತರ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ನೆಲೆಸಿರುವ ಪಾಶ್ಚಾತ್ಯರನ್ನು ಅಪಹರಿಸುತ್ತಿದ್ದ ಆರೋಪವೂ ಈತನ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.