ವಿಕ್ರಮ್ ಮಿಸ್ರಿ
ಅಬುಧಾಬಿ: ಅರಬ್ ಸಂಯುಕ್ತ ರಾಷ್ಟ್ರದ (ಯುಎಇ) ಅಂತರರಾಷ್ಟ್ರೀಯ ಸಹಕಾರ ಇಲಾಖೆ ಸಚಿವ ರೀಮ್ ಅಲ್ ಹಾಶಿಮಿ ಅವರನ್ನು ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಭೇಟಿಯಾಗಿ ದ್ವಿಪಕ್ಷೀಯ ಪಾಲುದಾರಿಕೆ ವಿಸ್ತರಣೆ ಮತ್ತು ಭವಿಷ್ಯದ ಸಹಕಾರ ಕ್ಷೇತ್ರಗಳ ಬಗ್ಗೆ ಸಮಾಲೋಚಿಸಿದರು.
ಯುಎಇನ ಭಾರತೀಯ ರಾಯಭಾರ ಕಚೇರಿಯು ‘ಎಕ್ಸ್’ನಲ್ಲಿ , ‘ ಮಿಸ್ರಿ ಮತ್ತು ಹಾಶಿಮಿ ಅವರು ಭಾರತ–ಯುಎಇ ನಡುವಿನ ಸಮಗ್ರ ಪಾಲುದಾರಿಕೆಯ ತಂತ್ರಗಾರಿಕೆ ಬಗ್ಗೆ ಚರ್ಚಿಸಿದರು’ ಎಂದು ಹೇಳಿದೆ.
ಇದಕ್ಕೂ ಮುನ್ನ ಮಿಸ್ರಿ ಅವರು ಯುಎಇನ ಸಹಿಷ್ಣುತೆ ಮತ್ತು ಸಹಬಾಳ್ವೆ ಇಲಾಖೆಯ ಸಚಿವ ಮುಬಾರಕ್ ಅಲ್ ನಹ್ಯಾನ್ ಮತ್ತು ರಕ್ಷಣಾ ವ್ಯವಹಾರಗಳ ಮುಖ್ಯಸ್ಥ ಅಲಿ ರಶಿದ್ ಅಲ್ ನೂಮಿ ಅವರೊಂದಿಗೂ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.