ADVERTISEMENT

ಶೃಂಗ್ಲಾ–ಗೊಟಬಯ ರಾಜಪಕ್ಷೆ ಭೇಟಿ: ದ್ವಿಪಕ್ಷೀಯ ಸಂಬಂಧ ವೃದ್ಧಿ ಚರ್ಚೆ

ಪಿಟಿಐ
Published 5 ಅಕ್ಟೋಬರ್ 2021, 11:14 IST
Last Updated 5 ಅಕ್ಟೋಬರ್ 2021, 11:14 IST
ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶೃಂಗ್ಲಾ ಅವರು ಶ್ರೀಲಂಕಾದ ಕೊಲಂಬೊದಲ್ಲಿ ವಸತಿ ಮತ್ತು ಶಿಕ್ಷಣ ವಲಯದ ನಾಲ್ಕು ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 
ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶೃಂಗ್ಲಾ ಅವರು ಶ್ರೀಲಂಕಾದ ಕೊಲಂಬೊದಲ್ಲಿ ವಸತಿ ಮತ್ತು ಶಿಕ್ಷಣ ವಲಯದ ನಾಲ್ಕು ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.    

ಕೊಲೊಂಬೊ: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ಮಂಗಳವಾರ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಭೇಟಿ ಮಾಡಿ, ಉಭಯ ದೇಶಗಳ ನಡುವಿನ ಸಮಗ್ರ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಮುಂದುವರಿಸುವ ಮಾರ್ಗಗಳ ಕುರಿತು ಚರ್ಚಿಸಿದರು.

ನಾಲ್ಕು ದಿನಗಳ ಪ್ರವಾಸಕ್ಕಾಗಿ ಶನಿವಾರ ಶ್ರೀಲಂಕಾಕ್ಕೆ ಆಗಮಿಸಿದ ಶೃಂಗ್ಲಾ ಅವರು, ಈ ಪ್ರವಾಸದ ಅವಧಿಯಲ್ಲಿ ದ್ವೀಪರಾಷ್ಟ್ರದ ನಾಯಕರೊಂದಿಗೆ ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರ ಸಂಬಂಧದ ಬಲವರ್ಧನೆ ಕುರಿತು ಚರ್ಚಿಸಿದರು.

ಶೃಂಗ್ಲಾ ಅವರು ಸೋಮವಾರ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಮಾತುಕತೆ ನಡೆಸಿದ್ದರು. ತಮಿಳು ನಾಯಕರೊಂದಿಗೂ ಮಾತುಕತೆ ನಡೆಸಿದ್ದ ಅವರು, ಲಂಕಾದಲ್ಲಿ ಅಲ್ಪಸಂಖ್ಯಾತರಾಗಿರುವ ತಮಿಳರ ಹಕ್ಕುಗಳ ಪೂರ್ಣ ರಕ್ಷಣೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದರು.

ADVERTISEMENT

1987ರಲ್ಲಿ ನಡೆದ ಭಾರತ–ಲಂಕಾ ಒಪ್ಪಂದದ 13ನೇ ತಿದ್ದುಪಡಿಯು ತಮಿಳು ಸಮುದಾಯದವರಿಗೆ ಅಧಿಕಾರ ಹಂಚುವ ವಿಷಯವನ್ನು ಪ್ರಸ್ತಾಪಿಸುತ್ತದೆ. ಇದನ್ನು ಅಕ್ಷರಶಃ ಜಾರಿಗೆ ತರಲು ಭಾರತ ಒತ್ತಾಯಿಸುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.