ADVERTISEMENT

ಇಂಡೊನೇಷ್ಯಾದ ನಿಕೆಲ್‌ ಸ್ಥಾವರದಲ್ಲಿ ಸ್ಫೋಟ: 13 ಮಂದಿ ಸಾವು

ಏಜೆನ್ಸೀಸ್
Published 24 ಡಿಸೆಂಬರ್ 2023, 15:21 IST
Last Updated 24 ಡಿಸೆಂಬರ್ 2023, 15:21 IST
   

ಜಕಾರ್ತ (ಇಂಡೊನೇಷ್ಯಾ) : ಸುಲಾವೇಸಿ ದ್ವೀಪದಲ್ಲಿರುವ ಚೀನಾ ಒಡೆತನದ ನಿಕೆಲ್‌ ಉತ್ಪಾದನಾ ಸ್ಥಾವರದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 13 ಕಾರ್ಮಿಕರು ಮೃತಪಟ್ಟು, 46ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸುಲಾವೇಸಿ ಮಧ್ಯ ಪ್ರಾಂತ್ಯದ ಮೊರೊವಾಲಿ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿರುವ ಪಿಟಿ ಇಂಡೊನೇಷ್ಯಾ ಟಿಂಗ್‌ಶಾನ್‌ ಸ್ಟೇನ್‌ಲೆಸ್ ಸ್ಟೀಲ್ (ಐಟಿಎಸ್ಎಸ್) ಒಡೆತನದ ಸ್ಥಾವರದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 5.30ಕ್ಕೆ ಈ ದುರ್ಘಟನೆ ಸಂಭವಿಸಿದೆ ಎಂದು ಸಂಕೀರ್ಣದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೃತರಲ್ಲಿ ಒಂಬತ್ತು ಮಂದಿ ಇಂಡೊನೇಷ್ಯಾದ ಕಾರ್ಮಿಕರು. ನಾಲ್ವರು ಚೀನಿ ಕಾರ್ಮಿಕರು. ಗಾಯಾಳುಗಳ ಪೈಕಿ 29 ಮಂದಿಯನ್ನು ಮೊರೊವಾಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ಮಂದಿ ಕೈಗಾರಿಕಾ ಸಂಕೀರ್ಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೈಗಾರಿಕಾ ಸಂಕೀರ್ಣದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.