ADVERTISEMENT

ಬರ್ಲಿನ್ ಗೋಡೆಗೆ 60 ವರ್ಷ: ಜರ್ಮನಿಯಲ್ಲಿ ಸ್ಮರಣಾರ್ಥ ಕಾರ್ಯಕ್ರಮ

ಏಜೆನ್ಸೀಸ್
Published 13 ಆಗಸ್ಟ್ 2021, 14:11 IST
Last Updated 13 ಆಗಸ್ಟ್ 2021, 14:11 IST
ಬರ್ಲಿನ್‌ ಗೋಡೆ ನಿರ್ಮಾಣದ 60ನೇ ವಾರ್ಷಿಕೋತ್ಸವ ನಿಮಿತ್ತ ಶುಕ್ರವಾರ ಬರ್ಲಿನ್ ವಾಲ್ ಸ್ಮಾರಕದ ಬಳಿ ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು – ರಾಯಿಟರ್ಸ್‌ ಚಿತ್ರ
ಬರ್ಲಿನ್‌ ಗೋಡೆ ನಿರ್ಮಾಣದ 60ನೇ ವಾರ್ಷಿಕೋತ್ಸವ ನಿಮಿತ್ತ ಶುಕ್ರವಾರ ಬರ್ಲಿನ್ ವಾಲ್ ಸ್ಮಾರಕದ ಬಳಿ ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು – ರಾಯಿಟರ್ಸ್‌ ಚಿತ್ರ   

ಬರ್ಲಿನ್: ಪೂರ್ವ ಮತ್ತು ಪಶ್ಚಿಮ ಜರ್ಮನಿ ಬೇರ್ಪಡಿಸಲು ಪೂರ್ವ ಜರ್ಮನ್‌ ಅಧಿಕಾರಿಗಳು ನಿರ್ಮಿಸಿದ್ದ ಬರ್ಲಿನ್‌ ಗೋಡೆಗೆ 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಜರ್ಮನಿಯಲ್ಲಿ ಬರ್ಲಿನ್‌ ಗೋಡೆಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ಮೂರು ದಶಕಗಳಲ್ಲಿ ಪಶ್ಚಿಮ ಜರ್ಮನಿಗೆ ಪಲಾಯನ ಮಾಡಲು ಪ್ರಯತ್ನಿಸಿದ ಕನಿಷ್ಠ 140 ಜನರು ಬರ್ಲಿನ್‌ ಗೋಡೆ ಬಳಿ ಜೀವ ತೆತ್ತಿದ್ದಾರೆ.

1961ರಆಗಸ್ಟ್ 13ರಂದು ನಿರ್ಮಾಣ ಆರಂಭಿಸಿದ ಈ ಗೋಡೆ ಕಮ್ಯುನಿಸ್ಟ್ ಆಡಳಿತಕ್ಕೆ ‘ಅಂತ್ಯದ ಆರಂಭ’ ಎಂದು ಕರೆದಿರುವ ಜರ್ಮನಿಯ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೈನ್‌ಮೀರ್, ದೇಶವನ್ನುಆ ಸಮಯದಲ್ಲಿ ಫ್ಯಾಸಿಸಂನಿಂದ ರಕ್ಷಿಸಲು ಬರ್ಲಿನ್‌ ಗೋಡೆಯನ್ನು ವಿನ್ಯಾಸಗೊಳಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಬರ್ಲಿನ್ ಗೋಡೆಯು 155 ಕಿಲೋಮೀಟರ್ (96 ಮೈಲಿ)ವರೆಗೆ ವಿಸ್ತರಿಸಿ, ಈ ಗೋಡೆ ಪಶ್ಚಿಮ ಬರ್ಲಿನ್ ಅನ್ನು 1989 ರವರೆಗೆ ಸುತ್ತುವರಿದಿತ್ತು. ಗೋಡೆ ದಾಟಲು ಜನರು ಸಾಮೂಹಿಕ ಪ್ರತಿಭಟನೆಗಳನ್ನು ಅನುಸರಿಸಿದ ನಂತರ ಪೂರ್ವ ಜರ್ಮನಿಯ ಅಧಿಕಾರಿಗಳು ಅನಿವಾರ್ಯವಾಗಿ ಗೋಡೆಯ ಗೇಟುಗಳನ್ನು ತೆರೆದರು. ಒಂದು ವರ್ಷದೊಳಗೆ, ಪೂರ್ವ ಮತ್ತು ಪಶ್ಚಿಮ ಜರ್ಮನಿ ಮತ್ತೆ ಒಂದಾದವು.

ಆ ಅವಧಿಯ ನೆನಪುಗಳು ಮಸುಕಾಗದಂತೆ ಜರ್ಮನರನ್ನು ಸ್ಮರಿಸಿಕೊಂಡ ಸ್ಟೈನ್‌ಮೀರ್, ಮುಂದಿನ ತಿಂಗಳು ದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಜನರಿಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.