ADVERTISEMENT

ರಷ್ಯಾ ಇಂಧನ ಖರೀದಿ ಬಹಿಷ್ಕರಿಸಲು ಜರ್ಮನಿ ನಕಾರ

ಏಜೆನ್ಸೀಸ್
Published 23 ಮಾರ್ಚ್ 2022, 19:46 IST
Last Updated 23 ಮಾರ್ಚ್ 2022, 19:46 IST

ಬರ್ಲಿನ್: ಉಕ್ರೇನ್ ಮೇಲಿನ ಆಕ್ರಮಣದಿಂದಾಗಿ ರಷ್ಯಾದ ಮೇಲೆ ಹಲವು ದೇಶಗಳು ಕಠಿಣ ನಿರ್ಬಂಧದ ವಿಧಿಸಿರುವ ಹೊರತಾಗಿಯೂ, ರಷ್ಯಾದಿಂದ ಇಂಧನ ಪೂರೈಕೆ ಬಹಿಷ್ಕರಿಸಲು ಜರ್ಮನಿ ನಿರಾಕರಿಸಿದೆ.

ರಷ್ಯಾದ ಮೇಲೆ ಈಗಾಗಲೇ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ರಷ್ಯಾದ ಅರ್ಥ ವ್ಯವಸ್ಥೆ ಮೇಲೆ ದಿನೇ ದಿನೇ ಪರಿಣಾಮ ಬೀರಿದೆ. ರಷ್ಯಾದಿಂದ ತೈಲೋತ್ಪನ್ನ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಜರ್ಮನಿಯ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜರ್ಮನಿಯ ಛಾನ್ಸಲರ್‌ಒಲಾಫ್‌ ಶೋಲ್ಸ್‌ ಬುಧವಾರ ತಿಳಿಸಿದರು.

ರಷ್ಯಾದ ತೈಲ, ಕಲ್ಲಿದ್ದಲು ಮತ್ತು ಅನಿಲದ ಮೇಲೆ ಹೆಚ್ಚು ಜರ್ಮನಿಗಿಂತಲೂಯುರೋಪಿನ ಇತರ ದೇಶಗಳು ಹೆಚ್ಚು ಅವಲಂಬಿತವಾಗಿವೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.