ಭಾರತೀಯ ಸೇನೆಯ ಹೆಲಿಕಾಪ್ಟರ್ ಗಸ್ತು
(ಪಿಟಿಐ ಚಿತ್ರ)
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯನ್ನು ವಿಶ್ವದಾದ್ಯಂತ ವಿವಿಧ ನಾಯಕರು ಖಂಡಿಸಿದ್ದು ಪ್ರಮುಖ ನಾಯಕರ ಹೇಳಿಕೆಗಳು ಇಲ್ಲಿವೆ:
ಇಂಥ ಹೀನ ಕೃತ್ಯ ಎಸಗಿದವರನ್ನು ಕಟಕಟೆಯಲ್ಲಿ ನಿಲ್ಲಿಸಲು ಭಾರತಕ್ಕೆ ಅಮೆರಿಕದಿಂದ ಸಂಪೂರ್ಣ ಬೆಂಬಲವಿದೆ. ಭಯೋತ್ಪಾದಕರ ದಾಳಿಯನ್ನು ಖಂಡಿಸುತ್ತೇನೆಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಯಾವುದೇ ಸಂದರ್ಭದಲ್ಲಿಯೂ ನಾಗರಿಕರ ಮೇಲಿನ ದಾಳಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲಆ್ಯಂಟೊನಿಯೊ ಗುಟೆರಸ್, ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ
ಅದೇನೆ ಆದರೂ ಹೀನ ಅಪರಾಧಕ್ಕೆ ಸಮರ್ಥನೆ ಇಲ್ಲ. ಇಂಥ ಕೃತ್ಯ ಎಸಗಿದವರು ಕಠಿಣ ಶಿಕ್ಷೆ ಎದುರಿಸಲೇ ಬೇಕು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೇಕಾದ ಎಲ್ಲ ಸಹಕಾರ ನೀಡುತ್ತೇವೆವಾದ್ಲಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
ಇಂಥ ಕ್ರೂರ ಭಯೋತ್ಪಾದಕ ದಾಳಿಯ ವಿಚಾರ ತಿಳಿದು ತೀವ್ರ ದುಃಖವಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಇಸ್ರೇಲ್ ನಿಲ್ಲಲಿದೆಬೆಂಜಮಿನ್ ನೇತನ್ಯಾಹು, ಇಸ್ರೇಲ್ ಪ್ರಧಾನಿ
ಮುಗ್ದ ಜನರನ್ನು ಹತ್ಯೆ ಮಾಡುವುದಕ್ಕೆ ಯಾವುದೇ ರೀತಿಯ ಸಮರ್ಥನೆ ಇಲ್ಲ. ಇದೊಂದು ಕ್ರೂರ ದಾಳಿಯಾಗಿದೆ. ಇಂಥ ಕಷ್ಟದ ಸಮಯದಲ್ಲಿ ಜರ್ಮನಿಯು ಭಾರತದೊಂದಿಗೆ ನಿಲ್ಲುತ್ತದೆಜರ್ಮನಿ ವಿದೇಶಾಂಗ ಕಚೇರಿ
ಭಾರತದ ಆತ್ಮಬಲವನ್ನು ಕುಂದಿಸಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿದೆ. ಇಂಥ ಅಗ್ನಿಪರೀಕ್ಷೆಯ ಸಂದರ್ಭದಲ್ಲಿ ಭಾರತವು ಧೈರ್ಯವಾಗಿ ನಿಲ್ಲುತ್ತದೆ. ಯುರೋಪ್ ನಿಮ್ಮೊಂದಿಗಿದೆಉರ್ಸುಲೊ ವಾಂಡೊರ್ ಲೆಯೆನ್, ಐರೋಪ್ಯ ಒಕ್ಕೂಟದ ಮುಖ್ಯಸ್ಥೆ
ಅನಂತನಾಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಮೃತಪಟ್ಟ ಬಗ್ಗೆ ಕಳವಳ ವ್ಯಕ್ತಪಡಿಸುತ್ತೇವೆ. ಮೃತಪಟ್ಟವರಿಗೆ ನಮ್ಮ ಸಂತಾಪಗಳು ಮತ್ತು ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿಪಾಕಿಸ್ತಾನ ವಿದೇಶಾಂಗ ಕಚೇರಿ
ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಭದ್ರತೆಯನ್ನು ವಿಫಲಗೊಳಿಸಿ, ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುವ ಎಲ್ಲ ರೀತಿಯ ಹಿಂಸೆ ಮತ್ತು ಭಯೋತ್ಪಾದನೆಯನ್ನು ನಾವು ಸದಾ ವಿರೋಧಿಸುತ್ತೇವೆಯುಎಇ ವಿದೇಶಾಂಗ ಸಚಿವಾಲಯ
ನೇಪಾಳವು ಭಾರತದೊಂದಿಗೆ ಗಟ್ಟಿಯಾಗಿ ನಿಲ್ಲುತ್ತದೆ. ಭಯೋತ್ಪಾದನೆಯ ಎಲ್ಲ ಕೃತ್ಯಗಳನ್ನು ಖಂಡಿಸುತ್ತದೆಕೆ.ಪಿ. ಶರ್ಮಾ ಓಲಿ, ನೇಪಾಳ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.