ADVERTISEMENT

ನೈಜೀರಿಯ: 47 ನಾಗರಿಕರ ಗುಂಡಿಕ್ಕಿ ಹತ್ಯೆ

ಏಜೆನ್ಸೀಸ್
Published 20 ಡಿಸೆಂಬರ್ 2021, 12:54 IST
Last Updated 20 ಡಿಸೆಂಬರ್ 2021, 12:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಾಗೋಸ್‌, ನೈಜೀರಿಯ: ನೈಜೀರಿಯದ ವಾಯವ್ಯ ಭಾಗದ ಗಲಭೆ ಪೀಡಿತ ಗ್ರಾಮೀಣ ಪ್ರದೇಶದಲ್ಲಿ 47 ನಾಗರಿಕರನ್ನು ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಕೃತ್ಯ ಎಸಗಿರುವ ದುಷ್ಕರ್ಮಿಗಳ ಶೋಧಕ್ಕಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ.

ನೈಜೀರಿಯದ ರಾಜಧಾನಿ ಅಬುಜಾಗೆ ಹೊಂದಿಕೊಂಡಿರುವ ಕಡುನಾದಲ್ಲಿ ದಾಳಿ ನಡೆದಿದೆ. ಇದರ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, 2001ರಲ್ಲಿ 2,500 ಜನರ ಹತ್ಯೆಮಾಡಿದ್ದ ಶಸ್ತ್ರಸಜ್ಜಿತರ ತಂಡವೇ ಈ ಕೃತ್ಯವನ್ನೂ ನಡೆಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ದಶಕಗಳಿಂದ ಇಲ್ಲಿನ ಹೌಸಾ ಕೃಷಿಕ ಸಮುದಾಯದ ಜೊತೆಗೆ ನೀರು ಮತ್ತು ಭೂಮಿ ಕುರಿತಂತೆ ವೈಮನಸ್ಯ, ಸಂಘರ್ಷ ನಡೆಸುತ್ತಿರುವ ಫುಲಾನಿ ಜನಾಂಗದ, ಬಹುತೇಕ ಯುವಕರೇ ಇರುವ ಗುಂಪು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಶುಕ್ರವಾರ ಒಂಬತ್ತು ಜನರನ್ನು ಕೊಲ್ಲಲಾಗಿತ್ತು. ಭಾನುವಾರ 38 ಜನರನ್ನು ಕೊಲ್ಲಲಾಗಿದೆ. ಮನೆ, ವಾಹನಗಳಿಗೆ ಬೆಂಕಿಹಚ್ಚಿದ್ದು, ಕೃಷಿ ಉತ್ಪನ್ನಗಳೂ ನಾಶವಾಗಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.