ADVERTISEMENT

ವಿಶ್ವಸಂಸ್ಥೆ ಅಧಿವೇಶನಕ್ಕೆ ಧ್ವನಿಮುದ್ರಿತ ಸಂದೇಶ: ಗುಟೆರಸ್ ಸಲಹೆ

ಪಿಟಿಐ
Published 19 ಮೇ 2020, 20:56 IST
Last Updated 19 ಮೇ 2020, 20:56 IST
ಅಂಟೊನಿಯೊ ಗುಟೆರೆಸ್
ಅಂಟೊನಿಯೊ ಗುಟೆರೆಸ್   

ವಿಶ್ವಸಂಸ್ಥೆ: ಸೆಪ್ಟೆಂಬರ್‌ನಲ್ಲಿನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ವಿಶ್ವದ ನಾಯಕರ ಧ್ವನಿಮುದ್ರಿತ ಸಂದೇಶಗಳನ್ನು ಬಳಸಲು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊ ನಿಯೊ ಗುಟೆರಸ್ ಸಲಹೆ ನೀಡಿದ್ದಾರೆ.

ಕೋವಿಡ್‌–19 ಕಾರಣಕ್ಕಾಗಿ ವಿವಿಧ ದೇಶಗಳ ನಾಯಕರು ಅಧಿವೇಶನದಲ್ಲಿ ಭಾಗವಹಿಸುವುದು ಅಸಂಭವ. ಆದ್ದರಿಂದ ಧ್ವನಿಮುದ್ರಿತ ಸಂದೇಶಗಳನ್ನು ಬಳಸುವ ಮೂಲಕ ಅಧಿವೇಶನವನ್ನು ವಿಭಿನ್ನ ಸ್ವರೂಪದಲ್ಲಿ ನಡೆಸಬೇಕೆಂದು ಗುಟೆರಸ್, ಅಧಿವೇಶ ನದ ಅಧ್ಯಕ್ಷ ಟಿಜ್ಜಾನಿ ಮೊಹಮ್ಮದ್ ಬಂದೆ ಅವರಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT