ADVERTISEMENT

ಮಾರ್ಚ್‌ 6ರಿಂದ ಎಚ್‌–1ಬಿ ವೀಸಾ ಸಲ್ಲಿಕೆ ಪ್ರಕ್ರಿಯೆ ಆರಂಭ

ಪಿಟಿಐ
Published 31 ಜನವರಿ 2024, 15:57 IST
Last Updated 31 ಜನವರಿ 2024, 15:57 IST
<div class="paragraphs"><p>ಎಚ್‌–1ಬಿ ವೀಸಾ </p></div>

ಎಚ್‌–1ಬಿ ವೀಸಾ

   

ವಾಷಿಂಗ್ಟನ್‌ (ಪಿಟಿಐ): 2025ರ ಹಣಕಾಸು ವರ್ಷದ ಎಚ್‌–1ಬಿ ವೀಸಾ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮಾರ್ಚ್‌ 6ರಿಂದ ಆರಂಭಿಸಲಾಗುವುದು. ಮಾರ್ಚ್‌ 22ರ ವರೆಗೆ ಈ ಪ್ರಕ್ರಿಯೆ ನಡೆಯಲಿದ್ದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಯ (ಯುಎಸ್‌ಸಿಐಎಸ್‌) ಆನ್‌ಲೈನ್ ಪೋರ್ಟಲ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಸಂಸ್ಥೆ ಮಂಗಳವಾರ ತಿಳಿಸಿದೆ.

ಅಲ್ಲದೇ ವೀಸಾ ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಮತ್ತು ವಂಚನೆ ನಡೆಯದಂತೆ ತಡೆಯುವ ದಿಸೆಯಲ್ಲಿ ವೀಸಾ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ ಎಂದು ಕೂಡಾ ಸಂಸ್ಥೆ ಹೇಳಿದೆ. 

ADVERTISEMENT

ಅದರಂತೆ, ಫಲಾನುಭವಿ ಕೇಂದ್ರಿತ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗುವುದು. ಒಬ್ಬ ಉದ್ಯೋಗಿಯು ಹಲವಾರು ಕಂಪನಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಅದನ್ನು ಒಂದೇ ಅರ್ಜಿ ಎಂದು ಪರಿಗಣಿಸಲಾಗುವುದು. ಇದರಿಂದ ವೀಸಾ ಜಾರಿ ಪ್ರಕ್ರಿಯೆಯಲ್ಲಿ ವಂಚನೆಯನ್ನು ತಡೆಗಟ್ಟಬಹುದು ಹಾಗೂ ಎಲ್ಲಾ ಅಭ್ಯರ್ಥಿಗಳಿಗೂ ಆಯ್ಕೆ ಆಗಲು ಸಮಾನ ಅವಕಾಶಗಳಿರುತ್ತವೆ ಎಂದು ಯುಎಸ್‌ಸಿಐಎಸ್‌ ತಿಳಿಸಿದೆ. 

ಅಮೆರಿಕದ ಕಂಪನಿಗಳು ಭಾರತ, ಚೀನಾದಂಥ ದೇಶಗಳಿಂದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನೀಡುವ ವೀಸಾ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.