ADVERTISEMENT

ಬ್ರಿಟನ್‌– ಗೊಂದಲದ ಗೂಡು: ಮಾಜಿ ಪ್ರಧಾನಿ ಬ್ಲೇರ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:44 IST
Last Updated 25 ನವೆಂಬರ್ 2019, 19:44 IST
ಟೋನಿ ಬ್ಲೇರ್‌
ಟೋನಿ ಬ್ಲೇರ್‌   

ಲಂಡನ್‌ (ರಾಯಿಟರ್ಸ್‌): ‘ಡಿಸೆಂಬರ್‌ 12ರ ಚುನಾವಣೆಯಲ್ಲಿ ತಮ್ಮದೇ ಆದ ಲೇಬರ್‌ ಪಾರ್ಟಿ ಅಥವಾ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಕನ್ಸರ್ವೇಟಿವ್‌ ಪಕ್ಷ ಗೆಲ್ಲಲು ಅರ್ಹತೆ ಹೊಂದಿಲ್ಲ. ಹೀಗಾಗಿ ಬ್ರಿಟನ್‌ ಗೊಂದಲದ ಗೂಡಾಗಿದೆ’ ಎಂದು ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಸೋಮವಾರ ಎಚ್ಚರಿಸಿದ್ದಾರೆ.

‘ಒಂದು ವಿಶಿಷ್ಟ ರಾಜಕೀಯ ಪ್ರಯೋಗಕ್ಕೆ ಬ್ರಿಟನ್‌ ನೆಲೆಯಾಗಿದೆ. ಅಭಿವೃದ್ಧಿ ಹೊಂದಿದ ಪ್ರಮುಖ ರಾಷ್ಟ್ರವು ತನ್ನ ರಾಜಕೀಯ ಗೊಂದಲವನ್ನು ಪರಿವರ್ತಿಸಲು ಮತ್ತು ಅದರ ಅಗತ್ಯತೆಗಾಗಿ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಂಭೀರ ಹಾನಿಯಾಗದಂತೆ ಉಳಿಸಿಕೊಳ್ಳಲು ಸಾಧ್ಯವೇ ಎಂಬುವುದನ್ನು ಆಶಾದಾಯಕವಾಗಿ ಎದುರು ನೋಡುತ್ತಿದ್ದೇವೆ’ ಎಂದು ಅವರು ರಾಯಿಟರ್ಸ್‌ನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಬ್ರಿಟನ್‌ನಲ್ಲಿ ನಮ್ಮ ಜನಪ್ರಿಯತೆಯು ಶಾಶ್ವತವಾದ ನೀತಿಯನ್ನು ಕೇಂದ್ರೀಕರಿಸಿದೆ. ಬ್ರೆಕ್ಸಿಟ್‌ ಕುರಿತ ನೀತಿಯು ಶಾಶ್ವತವಾದ ಜನಪ್ರಿಯತೆ ಒದಗಿಸಬಹುದು. ಆದರೆ, ಐರೋಪ್ಯ ಒಕ್ಕೂಟದಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ. ಇದು ಸಹ ಚುನಾವಣೆ ಮೇಲೆ ಪರಿಣಾಮ ಬೀರಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

‘ಲೇಬರ್ ಪಾರ್ಟಿ ತನ್ನ ಪ್ರಣಾಳಿಕೆಯಲ್ಲಿ ಅದರ ನಾಯಕತ್ವವು ಅತ್ಯಂತ ಆಮೂಲಾಗ್ರವೆಂದು ಹೇಳಿಕೊಂಡಿದೆ. ಇದು ಆಮೂಲಾಗ್ರ ಬದಲಾವಣೆಯ ಭರವಸೆ ನೀಡುತ್ತದೆ’ ಎಂದು ಬ್ಲೇರ್‌ ಹೇಳಿದ್ದಾರೆ.

‘ಈ ಚುನಾವಣೆ ನನ್ನ ಜೀವನದಲ್ಲಿಯೇ ಅತ್ಯಂತ ನಿಗೂಢತೆಯಿಂದ ಕೂಡಿದೆ. ಬ್ರಿಟನ್‌ನ ಸಂವೇದನಾಶೀಲ ರಾಜಕೀಯವನ್ನು ಮುಖ್ಯವಾಹಿನಿಗೆ ಪುನರ್‌ ತರುವುದು ಇಂದಿನ ತುರ್ತು ಅಗತ್ಯ. ಇಲ್ಲದಿದ್ದರೆ ಇಂಥ ಚುನಾವಣಾ ಪ್ರಯೋಗವು ಕೆಟ್ಟದಾಗಿ ಕೊನೆಗೊಳ್ಳುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.