ADVERTISEMENT

ಅಮೆರಿಕ: ಹಿಂದೂ ದೇವಾಲಯದಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 13:17 IST
Last Updated 20 ಜನವರಿ 2023, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹ್ಯೂಸ್ಟನ್‌: ಅಮೆರಿಕದ ಟೆಕ್ಸಾಸ್‌ನ ಬ್ರಾಸಸ್‌ ವ್ಯಾಲಿಯಲ್ಲಿಯ ಹಿಂದೂ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕೆಲ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಈ ಘಟನೆಯು ಅಮೆರಿಕದ ಭಾರತೀಯ ಸಮುದಾಯಕ್ಕೆ ಆಘಾತ ಉಂಟುಮಾಡಿದೆ ಎಂದು ಇಲ್ಲಿಯ ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.

ಇಲ್ಲಿಯ ಶ್ರೀ ಓಂಕಾರನಾಥ ದೇವಾಲಯದಲ್ಲಿ ಈ ಘಟನೆಯು ಜನವರಿ 11ರಂದು ನಡೆದಿದೆ.

ದೇವಸ್ಥಾನದ ಕಿಟಕಿಯನ್ನು ಮುರಿಯಲಾಗಿದೆ. ಹುಂಡಿ ಮತ್ತು ಬೆಲೆಬಾಳುವ ವಸ್ತುಗಳನ್ನಿಡುವ ಪೆಟ್ಟಿಗೆ ಕಳುವಾಗಿದೆ ಎಂದು ತಕ್ಷಣಕ್ಕೆ ತಿಳಿದುಬಂದಿದೆ. ದೇವಸ್ಥಾನದ ಹಿಂಬದಿಯಿರುವ ಅಪಾರ್ಟ್‌ಮೆಂಟ್‌ನಲ್ಲಿ ಅರ್ಚಕರು ವಾಸಿಸುತ್ತಾರೆ. ಅವರು ಕ್ಷೇಮದಿಂದಿದ್ದಾರೆ ಎಂದು ದೇವಾಲಯ ಮಂಡಳಿ ಸದಸ್ಯ ಶ್ರೀನಿವಾಸ ಸುಂಕಾರಿ ಹೇಳಿದ್ದಾರೆ.

ADVERTISEMENT

ಈ ರೀತಿಯ ಘಟನೆಗಳು ನಡೆದಾಗ, ಯಾರೋ ಅತಿಕ್ರಮಣ ಮಾಡಿದಂತೆ ಮತ್ತು ಯಾರಿಂದಲೂ ಗೌಪ್ಯತೆಗೆ ಭಂಗವಾದಂತೆ ಅನುಭವಾಗುತ್ತದೆ ಎಂದು ಸುಂಕಾರಿ ಹೇಳಿದ್ದಾರೆ.

ಕಳ್ಳತನದ ದೃಶ್ಯಗಳು ದೇವಸ್ಥಾನದಲ್ಲಿರುವ ಸಿ.ಸಿ.ಟಿ.ವಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಬ್ರಾಸಸ್‌ ವ್ಯಾಲಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.