ADVERTISEMENT

ಹಾಂಗ್‌ಕಾಂಗ್‌: ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಗ್ನೆಸ್ ಚೌ ಜೈಲಿನಿಂದ ಬಿಡುಗಡೆ

ಏಜೆನ್ಸೀಸ್
Published 12 ಜೂನ್ 2021, 7:48 IST
Last Updated 12 ಜೂನ್ 2021, 7:48 IST
ಹಾಂಗ್‌ಕಾಂಗ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಗ್ನೆ ಚೌ ಅವರು ಜೈಲಿನಿಂದ ಬಿಡುಗಡೆಗೊಂಡರು                                –ರಾಯಿಟರ್ಸ್‌ ಚಿತ್ರ                     
ಹಾಂಗ್‌ಕಾಂಗ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಗ್ನೆ ಚೌ ಅವರು ಜೈಲಿನಿಂದ ಬಿಡುಗಡೆಗೊಂಡರು                                –ರಾಯಿಟರ್ಸ್‌ ಚಿತ್ರ                        

ಹಾಂಗ್‌ಕಾಂಗ್‌: 2019ರಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾಗಿದ್ದ ಪ್ರಜಾಪ್ರಭುತ್ವ ಪರ ಕಾರ್ಯಕರ್ತೆ ಆಗ್ನೆಸ್ ಚೌ ಅವರನ್ನು ಆರು ತಿಂಗಳ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

ತೈ ಲಾಮ್‌ ಮಹಿಳಾ ಕಾರಾಗೃಹದಿಂದ ಬಿಡುಗಡೆಗೊಂಡ ಚೌ ಅವರು, ಅಲ್ಲಿಂದ ಖಾಸಗಿ ವಾಹನವೊಂದರಲ್ಲಿ ತೆರಳಿದರು. ಕಳೆದ ವರ್ಷ ಚೀನಾ ಜಾರಿಗೆ ತಂದ ರಾಷ್ಟ್ರೀಯ ಭದ್ರತಾ ಕಾನೂನಿನ ಪರಿಣಾಮವಾಗಿ ಅವರ ಬೆಂಬಲಿಗರ ಪೈಕಿ ಕಡಿಮೆ ಜನರಿದ್ದ ಗುಂಪೊಂದು ಚೌ ಅವರನ್ನು ಸ್ವಾಗತಿಸಿತು.

ಈ ಕಾಯ್ದೆಯಡಿ ಪ್ರಜಾಪ್ರಭುತ್ವ ಪರ ಹೋರಾಟಗಾರರಾದ ಜೋಸುವಾ ವಾಂಗ್‌, ಜಿಮ್ಮಿ ಲಾಯಿ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.

ADVERTISEMENT

ಹಾಂಗ್‌ಕಾಂಗ್‌ನ ಶಂಕಿತ ಅಪರಾಧಿಗಳನ್ನು ಚೀನಾಗೆ ಕಳುಹಿಸುವ ಉದ್ದೇಶದಿಂದ ರೂಪಿಸಲಾಗಿದ್ದ ಕಾಯ್ದೆಯನ್ನು ವಿರೋಧಿಸಿ 2019ರಲ್ಲಿ ಪ್ರತಿಭಟನೆ ನಡೆದಿತ್ತು. ಚೀನಾದಲ್ಲಿ ಅಧಿಕಾರಿಗಳು ಆರೋಪಿಗಳನ್ನು ಕ್ರೂರವಾಗಿ ನಡೆಸಿಕೊಳ್ಳಲು ಈ ಕಾನೂನಿನಡಿ ಅವಕಾಶ ಇದೆ. ನ್ಯಾಯಯುತ ವಿಚಾರಣೆಯಿಂದಲೂ ಆರೋಪಿಗಳು ವಂಚಿತರಾಗಲಿದ್ದಾರೆ ಎಂದು ಆರೋಪಿಸಿದ್ದ ಪ್ರಜಾಪ್ರಭುತ್ವಪರ ಕಾರ್ಯಕರ್ತರು, ಭಾರಿ ಪ್ರತಿಭಟನೆ ನಡೆಸಿದ್ದರು. ಬಳಿಕ ಕಾಯ್ದೆಯನ್ನು ಸರ್ಕಾರ ಹಿಂಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.