ADVERTISEMENT

ಹಾಂಗ್‌ಕಾಂಗ್‌ನಲ್ಲಿ ಕೊರೊನಾ ನಿರ್ಬಂಧಗಳು ಸಡಿಲ

ಏಜೆನ್ಸೀಸ್
Published 21 ಏಪ್ರಿಲ್ 2022, 12:47 IST
Last Updated 21 ಏಪ್ರಿಲ್ 2022, 12:47 IST
ಹಾಂಗ್‌ಕಾಂಗ್‌ನಲ್ಲಿ ಕೊರೊನಾ ನಿರ್ಬಂಧಗಳು ಸಡಿಲಗೊಂಡ ಹಿನ್ನೆಲೆಯಲ್ಲಿ, ಎಂ ಪ್ಲಸ್‌ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬ ತನ್ನ ಲಸಿಕಾ ಪ್ರಮಾಣ ಪತ್ರ ತೋರಿಸಿದನು.
ಹಾಂಗ್‌ಕಾಂಗ್‌ನಲ್ಲಿ ಕೊರೊನಾ ನಿರ್ಬಂಧಗಳು ಸಡಿಲಗೊಂಡ ಹಿನ್ನೆಲೆಯಲ್ಲಿ, ಎಂ ಪ್ಲಸ್‌ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬ ತನ್ನ ಲಸಿಕಾ ಪ್ರಮಾಣ ಪತ್ರ ತೋರಿಸಿದನು.   

ಬೀಜಿಂಗ್‌, ಚೀನಾ: ಹಾಂಗ್‌ಕಾಂಗ್‌ನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ.

ಕೊರೊನಾ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿರುವುದರಿಂದ, ಹಾಂಗ್‌ಕಾಂಗ್‌ನ ಡಿಸ್ನಿ ಲ್ಯಾಂಡ್‌, ವಸ್ತು ಸಂಗ್ರಹಾಲಯ ಮತ್ತು ರಾತ್ರಿಯ ವೇಳೆ‌ಯಲ್ಲಿನ ಹೋಟೆಲ್‌ಗಳು ಪುನಃ ಕಾರ್ಯಾರಂಭ ಮಾಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಆದರೆ ಮುಂಜಾಗ್ರತೆಯ ದೃಷ್ಟಿಯಿಂದ ತಮ್ಮ ನೆರೆಹೊರೆಯ ಮನೆಯವರೊಡನೆ ಮಾತನಾಡದಿರುವಂತೆ ಜನರಿಗೆ ನಿರ್ಬಂಧ ಹೇರಿದೆ.

ಹಾಂಗ್‌ಕಾಂಗ್‌ನಲ್ಲಿ ಕೊರೊನಾ ರೂಪಾಂತರದ ಐದನೇ ಅಲೆಯು ವ್ಯಾಪಕವಾಗಿ ಹರಡಿದ್ದಾಗ ಜನಪ್ರಿಯ ಥೀಮ್‌ ಪಾರ್ಕ್‌ಗಳು, ವಸ್ತು ಸಂಗ್ರಹಾಲ‌ಯಗಳು ಮುಂತಾದವುಗಳನ್ನು ಜನವರಿ ತಿಂಗಳಲ್ಲಿ ಮುಚ್ಚಲಾಗಿತ್ತು. ಹಾಂಗ್‌ಕಾಂಗ್‌ನ 74 ಲಕ್ಷ ಜನರ ಪೈಕಿ 72 ಲಕ್ಷ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಅಲ್ಲದೇ ಸೋಂಕಿನಿಂದ 9,000 ಜನ ಮೃತಪಟ್ಟಿದ್ದಾರೆ.

ADVERTISEMENT

ಇನ್ನು ಥೀಮ್‌ ಪಾರ್ಕ್‌ಗಳಿಗೆ ಶೇಕಡ 50 ರಷ್ಟು ಸಾಮರ್ಥ್ಯದ ಜನರು ಮಾತ್ರ ಪ್ರವೇಶಿಸಬಹುದಾಗಿದೆ. ಹೋಟೆಲ್‌ಗಳಲ್ಲಿ ಸಂಜೆ ಆರು ಗಂಟೆಯ ನಂತರ ಆಹಾರವನ್ನು ಸೇವಿಸಬಹುದಾಗಿದೆ. ಆದರೆ ಒಂದು ಮೇಜಿಗೆ ಕೇವಲ ನಾಲ್ಕು ಜನರು ಮಾತ್ರ ಕೂರಬಹುದಾಗಿದೆ. ಅಲ್ಲದೇ ತಮ್ಮ ಕೊರೊನಾ ಲಸಿಕೆಯ ಪ್ರಮಾಣ ಪತ್ರವನ್ನು ತೋರಿಸಿ, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದ ನಂತರಸಾರ್ವಜನಿಕ ಸ್ಥಳಗಳಿಗೆ ಜನರುಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.