
ಪ್ರಜಾವಾಣಿ ವಾರ್ತೆ
ಬೆಂಕಿ (ಪ್ರಾತಿನಿಧಿಕ ಚಿತ್ರ)
ಹಾಂಗ್‌ಕಾಂಗ್: ಇಲ್ಲಿನ ವಸತಿ ಸಮುಚ್ಚಯವೊಂದರ ಬಹುಮಹಡಿ ಕಟ್ಟಡಿಗಳಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ.
‘ಕಟ್ಟಡಗಳಲ್ಲಿದ್ದ 70 ಜನರನ್ನು ತಾತ್ಕಾಲಿಕ ಆಶ್ರಯತಾಣಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನಿರ್ಮಾಣ ಕಾಮಗಾರಿಗಾಗಿ ಕಟ್ಟಡಗಳ ಸುತ್ತಲೂ ಬಿದಿರಿನ ಕಂಬಗಳನ್ನು ಅಳವಡಿಸಿದ್ದರಿಂದ ಬೆಂಕಿಯು ಮತ್ತಷ್ಟು ತೀವ್ರವಾಗಿ ವ್ಯಾಪಿಸಿತ್ತು. ದಟ್ಟ ಹೊಗೆ ಮತ್ತು ಜ್ವಾಲೆ ಕಟ್ಟಡಗಳನ್ನು ಆವರಿಸಿಕೊಂಡಿತ್ತು.
‘ಬೆಂಕಿಯ ಜ್ವಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದವರಲ್ಲಿ ಬಹುತೇಕರು ವೃದ್ಧರು’ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.