ದುಬೈ: ‘ಆಫ್ರಿಕಾದ ವಲಸಿಗರು ಬಂಧನದಲ್ಲಿದ್ದ ಕೇಂದ್ರದ ಮೇಲೆ ಅಮೆರಿಕದ ವಾಯುಸೇನೆಯು ದಾಳಿ ನಡೆಸಿದ್ದರಿಂದ 68 ಮಂದಿ ಮೃತಪಟ್ಟಿದ್ದು, 47 ಮಂದಿ ಗಾಯಗೊಂಡಿದ್ದಾರೆ’ ಎಂದು ಯೆಮನ್‌ನ ಹೂಥಿ ಬಂಡುಕೋರರು ಸೋಮವಾರ ಆರೋಪಿಸಿದ್ದಾರೆ.
ಈ ಕುರಿತು ಅಮೆರಿಕ ಸೇನೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೂಥಿಗಳ ಭದ್ರಕೋಟೆಯಾದ ಯೆಮನ್‌ನ ಸಾದಾ ಪಟ್ಟಣದ ಮೇಲೆ ಈ ದಾಳಿ ನಡೆದಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ಹುಡುಕಿಕೊಂಡು, ಆಫ್ರಿಕಾ ಖಂಡದ ಇಥಿಯೋಪಿಯಾ ದೇಶದ ವಲಸಿಗರು ಯೆಮನ್‌ನ ಮೂಲಕ ದಾಟಿ ಹೋಗುವ ವೇಳೆ ಅವರನ್ನು ಬಂಧಿಸಿ, ಈ ಕೇಂದ್ರದಲ್ಲಿಡಲಾಗಿತ್ತು ಎಂದು ಹೇಳಲಾಗಿದೆ.
ದಾಳಿ ಬಳಿಕ ಕಟ್ಟಡದ ಸುತ್ತಲೂ ದಟ್ಟಣೆಯ ಹೊಗೆ ಆವರಿಸಿತ್ತು.
ದಾಳಿ ನಡೆದ ಜಾಗದಲ್ಲಿ ಮೃತದೇಹಗಳು ಬಿದ್ದಿರುವುದನ್ನು ಹೂಥಿಗಳ ಹಿಡಿತದಲ್ಲಿರುವ ‘ಅಲ್–ಮಸಿರಾ’ ಸುದ್ದಿವಾಹಿನಿಯಲ್ಲಿ ತೋರಿಸಲಾಗಿದೆ. ಈ ಜೈಲಿನಲ್ಲಿ 115 ಮಂದಿ ವಲಸಿಗರನ್ನು ಬಂಧಿಸಿಡಲಾಗಿತ್ತು’ ಎಂದು ಹೂಥಿಯ ಆಂತರಿಕ ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.