ADVERTISEMENT

ಭಾರತದೊಂದಿಗೆ ನನಗೆ ಉತ್ತಮ ಬಾಂಧ‌ವ್ಯವಿದೆ, ಆದರೆ ಅವರ… ಟ್ರಂಪ್ ಹೇಳಿದ್ದೇನು?

ಪಿಟಿಐ
Published 20 ಮಾರ್ಚ್ 2025, 8:03 IST
Last Updated 20 ಮಾರ್ಚ್ 2025, 8:03 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ನ್ಯೂಯಾರ್ಕ್: ‘ಅಮೆರಿಕದ ಆಮದು ಉತ್ಪನ್ನಗಳಿಗೆ ವಿಧಿಸುವ ಸುಂಕವನ್ನು ಭಾರತ ತಗ್ಗಿಸಲಿದೆ ಎಂಬ ವಿಶ್ವಾಸವಿದೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರು.

ADVERTISEMENT

‘ಏ. 2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸಲಿರುವ ಸುಂಕಕ್ಕೆ ಅನುಗುಣವಾಗಿ ಅಮೆರಿಕವು ಭಾರತದ ಉತ್ಪನ್ನಗಳಿಗೆ ಸುಂಕ ವಿಧಿಸಲಿದೆ’ ಎಂದು ಇದೇ ವೇಳೆ ಪುನರುಚ್ಚರಿಸಿದರು.

‘ಅಮೆರಿಕನ್ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ಮೋದಿ ಜೊತೆಗಿನ ಇತ್ತೀಚಿನ ಭೇಟಿ ಉಲ್ಲೇಖಿಸಿ, ‘ಭಾರತದೊಂದಿಗೆ ಉತ್ತಮ ಬಾಂಧವ್ಯವಿದೆ’ ಎಂದು ಅವರು ಹೇಳಿದರು. 

‘ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ ಭಾರತ ಎನ್ನುವುದಷ್ಟೆ ನನಗೆ ಸಮಸ್ಯೆ’ ಎಂದು ಟ್ರಂಪ್‌ ಅಭಿಪ್ರಾಯಪಟ್ಟರು.

‘ಭಾರತ ಗಣನೀಯವಾಗಿ ಸುಂಕ ತಗ್ಗಿಸಲಿದೆ ಎಂದು ಭಾವಿಸುತ್ತೇನೆ. ಆದರೆ, ಏಪ್ರಿಲ್‌ 2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸುವಷ್ಟೇ ಸುಂಕವನ್ನು ನಾವು ವಿಧಿಸಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.