ADVERTISEMENT

ಐಬಿಆರ್‌ಡಿ | ಅಮೆರಿಕದ ಪ್ರತಿನಿಧಿಯಾಗಿ ಭಾರತೀಯ ಅಮೆರಿಕನ್‌ ನೇಮಕ

ಪಿಟಿಐ
Published 5 ಮೇ 2020, 17:55 IST
Last Updated 5 ಮೇ 2020, 17:55 IST
   

ವಾಷಿಂಗ್ಟನ್‌: ಭಾರತೀಯ ಸಂಜಾತ ಅಶೋಕ್‌ ಮೈಕೆಲ್‌ ಪಿಂಟೊ ಅವರನ್ನು ಅಂತರರಾಷ್ಟ್ರೀಯ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್‌ನ (ಐಬಿಆರ್‌ಡಿ) ಅಮೆರಿಕದ ಪ್ರತಿನಿಧಿಯನ್ನಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನೇಮಿಸಿದ್ದಾರೆ.

ಸಂಸತ್ತಿನಲ್ಲಿ ಈ ನೇಮಕಾತಿಗೆ ಅನುಮೋದನೆ ದೊರಕಿದರೆ, ಪಿಂಟೊ ಅವರು ಎರಡು ವರ್ಷಗಳ ಅವಧಿಗೆ ಐಬಿಆರ್‌ಡಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಹುದ್ದೆ ನಿರ್ವಹಿಸುತ್ತಿದ್ದ ಎರಿಕ್‌ ಬೆಥೆಲ್‌ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.

ಭಾರತೀಯ ಸಂಜಾತೆ ಸರಿತಾನ್ಯಾಯಾಧೀಶರಾಗಿ ನೇಮಕ
ಭಾರತೀಯ ಸಂಜಾತೆ ಸರಿತಾ ಕೊಮಟಿರೆಡ್ಡಿ ಅವರನ್ನು ನ್ಯೂಯಾರ್ಕ್‌ ಫೆಡರಲ್‌ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ಟ್ರಂಪ್‌ ಅವರು ನೇಮಿಸಿದ್ದಾರೆ.

ADVERTISEMENT

ಪ್ರಸ್ತುತ ಕೊಮಟಿರೆಡ್ಡಿ ಅವರು ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ಅಟಾರ್ನಿ ಕಚೇರಿಯಲ್ಲಿ ಅಪರಾಧ ವಿಭಾಗದ ಉಪಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮನಿಶಾ ಸಿಂಗ್‌ ನೇಮಕ
ಭಾರತೀಯ ಸಂಜಾತರಾದ ರಾಜತಾಂತ್ರಿಕ ಅಧಿಕಾರಿ ಮನಿಶಾ ಸಿಂಗ್‌ ಅವರನ್ನು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಒಇಸಿಡಿ) ಅಮೆರಿಕದ ರಾಯಭಾರಿಯನ್ನಾಗಿ ಟ್ರಂಪ್‌ ಅವರು ನೇಮಿಸಿದ್ದಾರೆ.

ಸಿಂಗ್‌ ಅವರು ಪ್ರಸ್ತುತ ವಿದೇಶಾಂಗ ಇಲಾಖೆಯ ಆರ್ಥಿಕ ಮತ್ತು ವಾಣಿಜ್ಯ ವ್ಯವಹಾರಗಳ ವಿಭಾಗದ ಸಹಾಯಕ ಕಾರ್ಯದರ್ಶಿಯಾಗಿದ್ದಾರೆ.ಪ್ಯಾರಿಸ್‌ ಮೂಲದ ಆರ್ಥಿಕ ಸಂಸ್ಥೆಯಾಗಿರುವ ಒಇಸಿಡಿ, 36 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆರ್ಥಿಕ ಅಭಿವೃದ್ಧಿ ಮತ್ತು ಜಾಗತಿಕ ವಹಿವಾಟು ಉತ್ತೇಜಿಸಲು ಕಾರ್ಯನಿರ್ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.