ADVERTISEMENT

ಅಮೆರಿಕದ ಐಸಿಇ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ ಜೊನಾಥನ್

ವಾರಗಳ ಹಿಂದಷ್ಟೇ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು

ಏಜೆನ್ಸೀಸ್
Published 14 ಜನವರಿ 2021, 6:06 IST
Last Updated 14 ಜನವರಿ 2021, 6:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಯಾನ್ ಡಿಯಾಗೊ: ಅಮೆರಿಕದ ವಲಸೆ ಮತ್ತು ಸೀಮಾಸುಂಕ ಜಾರಿ ಏಜೆನ್ಸಿಯ (ಇಮಿಗ್ರೇಷನ್‌ ಅಂಡ ಕಸ್ಟಮ್ಸ್‌ ಎನ್‌ಫೋರ್ಸ್‌ಮೆಂಟ್–ಐಸಿಇ) ಪ್ರಭಾರಿ ನಿರ್ದೇಶಕ ಸ್ಥಾನಕ್ಕೆ ಜೊನಾಥನ್ ಫಹೆ ಅವರು ಬುಧವಾರ ರಾಜೀನಾಮೆ ನೀಡಿದ್ದಾರೆ.

ಕೆಲವು ವಾರಗಳ ಹಿಂದಷ್ಟೇ ಜೊನಾಥನ್ ಅವರು ಈ ನಿರ್ದೇಶಕ ಸ್ಥಾನವನ್ನು ವಹಿಸಿಕೊಂಡಿದ್ದರು.

ತಮ್ಮ ರಾಜೀನಾಮೆ ವಿಷಯವನ್ನು ಇಮೇಲ್ ಮೂಲಕ ಸಹೋದ್ಯೋಗಿಗಳಿಗೆ ತಿಳಿಸಿರುವ ಜೊನಾಥನ್, ಈ ದಿಢೀರ್‌ ನಿರ್ಗಮನದ ಬಗ್ಗೆ ಯಾವುದೇ ವಿವರ ನೀಡಿಲ್ಲ.

ADVERTISEMENT

ಜೊನಾಥನ್ ಅವರ ರಾಜೀನಾಮೆಯಿಂದ ತೆರವಾದ ಜಾಗಕ್ಕೆ ಅದೇ ಏಜೆನ್ಸಿಯಲ್ಲಿ ಉಪ ನಿರ್ದೇಶಕರಾಗಿ‌ದ್ದ ತಾಯೆ ಜಾನ್‌ಸರ್ ಅವರು ಏಜೆನ್ಸಿಯ ನಾಲ್ಕನೇ ಪ್ರಭಾರಿ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದಾರೆ.

ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡುವ ಮತ್ತು ಅಂತರರಾಷ್ಟ್ರೀಯ ಅಪರಾಧ ತನಿಖೆಗಳನ್ನು ನಡೆಸುವ ಐಸಿಇ ಏಜೆನ್ಸಿ ಅಮೆರಿಕದ ಹೋಮ್‌ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಭಾಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.