ADVERTISEMENT

ನನ್ನ ಹತ್ಯೆ ಯತ್ನದಲ್ಲಿ ಮೂವರು ಭಾಗಿ: ಇಮ್ರಾನ್‌ ಖಾನ್‌

ಪಿಟಿಐ
Published 27 ನವೆಂಬರ್ 2022, 14:15 IST
Last Updated 27 ನವೆಂಬರ್ 2022, 14:15 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ‘ನ.3ರಂದು ವಜೀರಾಬಾದ್‌ನಲ್ಲಿ ನಡೆದನನ್ನ ವಿರುದ್ಧದ ಹತ್ಯೆ ಯತ್ನದಲ್ಲಿ ಮೂವರು ಶೂಟರ್‌ಗಳು ಭಾಗಿಯಾಗಿದ್ದರು’ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್‌ ತೆಹರೀಕ್‌ ಇ ಇನ್ಸಾಫ್‌ನ ಅಧ್ಯಕ್ಷ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ.

ಗುಣಮುಖರಾದ ಬಳಿಕ ಮೊದಲ ಬಾರಿಗೆ ರಾವಲ್‌ಪಿಂಡಿನಲ್ಲಿಶನಿವಾರ ರಾತ್ರಿ ನಡೆದ ರ್‍ಯಾಲಿವೊಂದರಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮೊದಲು ಬಂಧಿತರಾದ ಇಬ್ಬರು ದಾಳಿಕೋರರಲ್ಲಿ ಒಬ್ಬ ನನ್ನ ಹಾಗೂ ಪಕ್ಷದ ಮುಖಂಡರ ಮೇಲೆ ಗುಂಡು ಹಾರಿಸಿದ. ಮತ್ತೊಬ್ಬ ನಾನು ಇದ್ದ ವಾಹನದ ಮೇಲೆ ಗುಂಡು ಹಾರಿಸಿದ. ನನ್ನ ಮೇಲೆ ಗುಂಡು ಹಾರಿಸಿದವನನ್ನು ಕೊಲ್ಲಲು ಮೂರನೇ ವ್ಯಕ್ತಿಯನ್ನು ನಿಯೋಜನೆ ಮಾಡಲಾಗಿತ್ತು’ ಎಂದು ಅವರು ದೂರಿದರು.

ADVERTISEMENT

‘ನನ್ನನ್ನು ಕೊಲ್ಲಲು ಬಂದಿದ್ದ ವ್ಯಕ್ತಿಯನ್ನು ಕೊಲ್ಲುವ ಬದಲು ರ್‍ಯಾಲಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರನ್ನು ಆ ಮೂರನೇ ವ್ಯಕ್ತಿ ಗುಂಡು ಹಾರಿಸಿ ಕೊಂದಿದ್ದಾನೆ’ ಎಂದು ಖಾನ್‌ ಆರೋಪಿಸಿದರು.

‘ಮುಂದಿನ ಚುನಾವಣೆ ಘೋಷಣೆಯಾಗುವವರೆಗೂಸರ್ಕಾರದ ವಿರುದ್ಧದ ನನ್ನ ಪ್ರತಿಭಟನೆ ಮುಂದುವರೆಯಲಿದೆ’ ಎಂದು ಅವರು ಘೊಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.