ADVERTISEMENT

ಇಮ್ರಾನ್‌ ಹತ್ಯೆ ಯತ್ನ ಖಂಡಿಸಿ ಪ್ರತಿಭಟನೆ; ತನಿಖೆಗೆ ಪಂಜಾಬ್‌ ಆಡಳಿತಕ್ಕೆ ಆದೇಶ

ಪಿಟಿಐ
Published 5 ನವೆಂಬರ್ 2022, 2:54 IST
Last Updated 5 ನವೆಂಬರ್ 2022, 2:54 IST
ಪಂಜಾಬ್‌: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ವಿಡಿಯೊ ಸ್ಕ್ರೀನ್‌ಶಾಟ್‌ | ಪಿಟಿಐ
ಪಂಜಾಬ್‌: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ವಿಡಿಯೊ ಸ್ಕ್ರೀನ್‌ಶಾಟ್‌ | ಪಿಟಿಐ   

ಇಸ್ಲಾಮಾಬಾದ್‌: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಹತ್ಯೆ ಯತ್ನವನ್ನು ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿರುವ ಇಮ್ರಾನ್‌ ಬೆಂಬಲಿಗರು ಅವಧಿಪೂರ್ವ ಚುನಾವಣೆಗೆ ಪಟ್ಟ ಹಿಡಿದಿದ್ದಾರೆ. ಬೆನ್ನಲ್ಲೇ ಪಾಕಿಸ್ತಾನ ಸರ್ಕಾರವು ಪಂಜಾಬ್‌ ಆಡಳಿತಾಧಿಕಾರಿಗೆ ತನಿಖೆ ನಡೆಸುವಂತೆ ಆದೇಶಿಸಿದೆ.

ಪಂಜಾಬ್‌ ಪ್ರಾಂತ್ಯದಲ್ಲಿ ಆಡಳಿತದಲ್ಲಿರುವ ಪಾಕಿಸ್ತಾನ್‌ ತೆಹರೀಕ್‌ ಇ ಇನ್ಸಾಫ್‌(ಪಿಟಿಐ), ಇಮ್ರಾನ್‌ ಖಾನ್‌ ಹತ್ಯೆ ಯತ್ನವು ಪೂರ್ವ ಯೋಜಿತ ಪಿತೂರಿ ಎಂದು ಆಪಾದಿಸಿದೆ. ಇದೀಗ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರ ಮುಸ್ಲೀಂ ಲೀಗ್‌ ನವಾಜ್‌ (ಪಿಎಂಎಲ್‌–ಎನ್‌) ನೇತೃತ್ವದ ಮೈತ್ರಿಕೂಟ ಒಕ್ಕೂಟದ ಸರ್ಕಾರವು ಜಂಟಿ ತನಿಖೆಗೆ ಆದೇಶಿಸಿದೆ. ಈ ಮೂಲಕ ಕೃತ್ಯದ ಹಿಂದಿನ ನೈಜ ಉದ್ದೇಶವು ವಿಶ್ವಾಸಾರ್ಹ ರೀತಿಯಲ್ಲಿ ಹೊರಬೀಳಲಿದೆ ಎಂದಿದೆ.

ನವೆಂಬರ್‌ 3ರಂದು, ಗುಜ್ರಾನ್‌ವಾಲಾ ನಗರದ, ಅಲ್ಲಾಹ್‌ವಾಲ ಚೌಕ್‌ ಬಳಿ ಇಮ್ರಾನ್‌ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಹತ್ಯೆ ಯತ್ನಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.