ADVERTISEMENT

ಡಿಟಿಪಿ ಲಸಿಕೆ ನೀಡಿಕೆಯಲ್ಲಿ ಭಾರತ ಸೇರಿ ಐದು ದೇಶಗಳು ಹಿಂದೆ: ವಿಶ್ವಸಂಸ್ಥೆ

ಡಿಟಿಪಿ ಲಸಿಕೆ ಪಡೆದ ಮಕ್ಕಳ ಸಂಖ್ಯೆ 2019ರಿಂದ 2021ರ ವರೆಗೆ ಶೇ 5ರಷ್ಟು ಇಳಿಕೆ

ಪಿಟಿಐ
Published 15 ಜುಲೈ 2022, 14:00 IST
Last Updated 15 ಜುಲೈ 2022, 14:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಭಾರತ, ನೈಜೀರಿಯಾ, ಇಂಡೋನೇಷ್ಯಾ, ಇಥಿಯೋಪಿಯಾ ಮತ್ತು ಫಿಲಿಪ್ಪೀನ್ಸ್‌ನಲ್ಲಿ2021ರಲ್ಲಿ ದಾಖಲೆ ಸಂಖ್ಯೆಯ ಮಕ್ಕಳು ಗಂಟಲಮಾರಿ, ಧನುರ್ವಾತ ಮತ್ತು ನಾಯಿ ಕೆಮ್ಮು (ಡಿಟಿಪಿ3) ರೋಗಗಳ ವಿರುದ್ಧದ ಲಸಿಕೆ ಪಡೆದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ಡಿಟಿಪಿ3 ಮೂರು ಡೋಸ್‌ ಲಸಿಕೆ ಪಡೆದ ಮಕ್ಕಳ ಪ್ರಮಾಣ 2019ರಿಂದ 2021ರ ವರೆಗೆ ಶೇ 5ರಷ್ಟು ಇಳಿಕೆಯಾಗಿ ಶೇ 81ಕ್ಕೆ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್‌) ವರದಿ ನೀಡಿವೆ.

2021ರಲ್ಲಿ 2.5 ಕೋಟಿ ಮಕ್ಕಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಡೋಸ್‌ ಡಿಟಿಪಿ ಲಸಿಕೆಯಿಂದ ವಂಚಿತರಾಗಿದ್ದಾರೆ. 1.8 ಕೋಟಿ ಮಕ್ಕಳು ಒಂದೂ ಡೋಸ್‌ ಡಿಟಿಪಿ ಲಸಿಕೆ ಪಡೆದಿಲ್ಲ. ಈ ಪೈಕಿ ಹೆಚ್ಚಿನವರು ಭಾರತ, ನೈಜೀರಿಯಾ, ಇಥಿಯೋಪಿಯಾ ಮತ್ತು ಫಿಲಿಪ್ಪೀನ್ಸ್‌ ದೇಶದವರು ಎಂದು ವರದಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.