ADVERTISEMENT

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಕಚೇರಿ

ಪಿಟಿಐ
Published 12 ಫೆಬ್ರುವರಿ 2022, 19:20 IST
Last Updated 12 ಫೆಬ್ರುವರಿ 2022, 19:20 IST
   

ಮೆಲ್ಬರ್ನ್: ಬೆಂಗಳೂರಿನಲ್ಲಿ ಕಾನ್ಸುಲೇಟ್‌ ಜನರಲ್ ಕಚೇರಿ ಹಾಗೂಆಧುನಿಕ ತಂತ್ರಜ್ಞಾನದ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವುದಾಗಿ ಆಸ್ಟ್ರೇಲಿಯಾ ತಿಳಿಸಿದೆ.

ವಿದೇಶಾಂಗ ವ್ಯವಹಾರ ಸಚಿವ ಎಸ್‌.ಜೈಶಂಕರ್‌ ಹಾಗೂ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮರೈಸ್ ಪೇನ್ ಅವರ ನಡುವೆ ಶನಿವಾರ ಇಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.

ಆಸ್ಟ್ರೇಲಿಯಾದಈ ನಿರ್ಧಾರ ಶಿಕ್ಷಣ, ಉದ್ಯೊಗ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ದೀರ್ಘಾವಧಿಯ ಸಹಕಾರ, ಬದ್ಧತೆಯನ್ನು ತೋರುತ್ತದೆ ಎಂಬುದಾಗಿ ಜೈಶಂಕರ್‌ತಿಳಿಸಿದರು.

ADVERTISEMENT

ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿ ಆಸ್ಟ್ರೇಲಿಯಾ ಗಡಿಯನ್ನು ವಿದೇಶಿ ವಿದ್ಯಾರ್ಥಿಗಳಿಗೆ ಮುಕ್ತಗೊಳಿಸಿ
ದ್ದನ್ನು ಸಹ ಸಚಿವರು ವಿಶೇಷವಾಗಿ ಉಲ್ಲೇಖಿಸಿ, ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.