ADVERTISEMENT

ಕಾಬೂಲ್‌ನಿಂದ 35 ಮಂದಿಯನ್ನು ತೆರವುಗೊಳಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 4:07 IST
Last Updated 27 ಆಗಸ್ಟ್ 2021, 4:07 IST

ಕಾಬೂಲ್: ಭಾರತವು ಕಾಬೂಲ್‌ನಿಂದ ತನ್ನ 24 ನಾಗರಿಕರು ಮತ್ತು 11 ನೇಪಾಳಿ ಪ್ರಜೆಗಳು ಸೇರಿ 35 ಜನರನ್ನು ಗುರುವಾರ ತೆರವುಗೊಳಿಸಿದೆ.

180 ಜನರನ್ನು ಕರೆತರಲು ಯೋಜಿಸಲಾಗಿತ್ತು. ಆದರೆ ಕಾಬೂಲ್‌ನಲ್ಲಿ ತಾಲಿಬಾನ್‌ ವಿಧಿಸಿದ ಇತರ ನಿರ್ಬಂಧಗಳು ಮತ್ತು ವಿವಿಧ ತಪಾಸಣಾ ಕೇಂದ್ರಗಳನ್ನು ದಾಟಿ ವಿಮಾನ ನಿಲ್ದಾಣಕ್ಕೆ ತಲುಪಲು ಅನೇಕರು ವಿಫಲರಾದರು. ಆದ್ದರಿಂದ 35 ಜನರನ್ನು ಮಾತ್ರ ಸ್ಥಳಾಂತರಿಸಲು ಸಾಧ್ಯವಾಯಿತು ಎಂದು ತೆರವು ಕಾರ್ಯಾಚರಣೆಯ ಸಿಬ್ಬಂದಿ ಹೇಳಿದರು.

‘ಆಪರೇಷನ್‌ ದೇವಿ ಶಕ್ತಿ ಕಾರ್ಯಾಚರಣೆ ಭಾಗವಾಗಿ ಭಾರತೀಯ ವಾಯುಪಡೆ ವಿಮಾನವು ಕಾಬೂಲ್‌ನಿಂದ 24 ಭಾರತೀಯರು ಮತ್ತು 11 ನೇಪಾಳಿಗರನ್ನು ಹೊತ್ತುಕೊಂಡು ದೆಹಲಿಗೆ ಸಾಗುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಬೆಳಿಗ್ಗೆ ಟ್ವೀಟ್‌ ಮಾಡಿದ್ದರು. ಕಳೆದ ಎರಡು ದಿನಗಳಿಂದ ಕಾಬೂಲ್‌ ವಿಮಾನ ನಿಲ್ದಾಣದ ಸುತ್ತಮುತ್ತಲೂ ಭದ್ರತಾ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿರುವ ಕಾರಣ ಅಫ್ಗನ್ನರು ಮತ್ತು ಇತರರು ಇಲ್ಲಿಗೆ ತಲುಪಲಾಗುತ್ತಿಲ್ಲ ಎಂದು ದೆಹಲಿಯನ್ನು ತಲುಪಿದ ಭಾರತೀಯರು ಅಲ್ಲಿನ ಪರಿಸ್ಥಿತಿ ತೆರೆದಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.