ADVERTISEMENT

ಭಾರತದಿಂದ ಉಕ್ರೇನ್‌ಗೆ ವೈದ್ಯಕೀಯ ನೆರವು

ಪಿಟಿಐ
Published 12 ಸೆಪ್ಟೆಂಬರ್ 2022, 15:46 IST
Last Updated 12 ಸೆಪ್ಟೆಂಬರ್ 2022, 15:46 IST

ಮಾಸ್ಕೊ: ರಷ್ಯಾ ಜೊತೆಗಿನ ಯುದ್ಧದಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಉಕ್ರೇನ್‌ಗೆ ಭಾರತವು ವೈದ್ಯಕೀಯ ನೆರವು ಒದಗಿಸಿದೆ.

‘ಭಾರತದ ರಾಯಭಾರಿ ಹರ್ಷಕುಮಾರ್‌ ಜೈನ್‌ ಅವರು ಅಗತ್ಯ ಔಷಧಗಳು ಹಾಗೂ ವೈದ್ಯಕೀಯ ಸಲಕರಣೆಗಳನ್ನು ಉಕ್ರೇನ್‌ನ ಸಹಾಯಕ ಆರೋಗ್ಯ ಸಚಿವ ಒಲೆಕ್ಸಿ ಇರೆಮೆಂಕೊ ಅವರಿಗೆ ಹಸ್ತಾಂತರಿಸಿದ್ದಾರೆ’ ಎಂದು ಕೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸೋಮವಾರ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT