ADVERTISEMENT

ನೇಪಾಳದ ಸೇನಾ ಮುಖ್ಯಸ್ಥ– ಲೆಫ್ಟಿನೆಂಟ್‌ ಜನರಲ್‌ ಸೇನ್‌ಗುಪ್ತಾ ಭೇಟಿ

ಪಿಟಿಐ
Published 26 ನವೆಂಬರ್ 2025, 15:54 IST
Last Updated 26 ನವೆಂಬರ್ 2025, 15:54 IST
..
..   

ಕಠ್ಮಂಡು: ಭಾರತೀಯ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಅನಿಂದ್ಯ ಸೇನ್‌ಗುಪ್ತಾ ಅವರು ನೇಪಾಳದ ಸೇನಾ ಮುಖ್ಯಸ್ಥ ಜನರಲ್‌ ಅಶೋಕ್‌ ರಾಜ್‌ ಸಿಗ್‌ಡೆಲ್ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ.

ಭಾರತ ಮತ್ತು ನೇಪಾಳದ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕ್ರಮಗಳ ಕುರಿತು ಇಬ್ಬರೂ ಚರ್ಚೆ ನಡೆಸಿದ್ದಾರೆ.

ಜನರಲ್‌ ಸಿಗ್‌ಡೆಲ್ ಅವರು ಭಾರತೀಯ ಸೇನೆಯ ಗೌರವ ಜನರಲ್‌ ಕೂಡ ಆಗಿದ್ದಾರೆ.

ADVERTISEMENT

ನಾಲ್ಕು ದಿನಗಳ ಪ್ರವಾಸಕ್ಕಾಗಿ ಕಠ್ಮಂಡುವಿಗೆ ಮಂಗಳವಾರ ತೆರಳಿದ ಜನರಲ್‌ ಸೇನ್‌ಗುಪ್ತಾ ಅವರು, ಭದ್ರಕಾಳಿ ಪ್ರಧಾನ ಕಚೇರಿಯಲ್ಲಿ ನೇಪಾಳದ ಸೇನಾ ಮುಖ್ಯಸ್ಥರನ್ನು ಭೇಟಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.