ADVERTISEMENT

ಆಸ್ಟ್ರೇಲಿಯಾ: ಪೊಲೀಸ್ ಅಧಿಕಾರಿಯಿಂದ ಹಲ್ಲೆ; ಭಾರತ ಮೂಲದ ವ್ಯಕ್ತಿ ಸಾವು

ಪಿಟಿಐ
Published 15 ಜೂನ್ 2025, 16:04 IST
Last Updated 15 ಜೂನ್ 2025, 16:04 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸುವ ಸಮಯದಲ್ಲಿ ಮಾಡಿದ ಹಲ್ಲೆಯಿಂದ ಆತ ಮೃತಪಟ್ಟಿದ್ದಾನೆ ಎಂದು ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.

ಮೃತ ಗೌರವ್‌ ಕುಂದಿ (42), ರಾಯ್‌ಸ್ಟನ್‌ ಪಾರ್ಕ್ ಬಳಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಇದನ್ನು ಗಸ್ತು ಸಿಬ್ಬಂದಿಯು ಕೌಟುಂಬಿಕ ಹಿಂಸಾಚಾರ ಎಂದು ತಪ್ಪಾಗಿ ಗ್ರಹಿಸಿ, ಕುಂದಿ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ  ಕುಂದಿ ಮೇಲೆ ಅಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಅದು ತಿಳಿಸಿದೆ.

ADVERTISEMENT

ಹಲ್ಲೆಯಿಂದ ಕುಂದಿಯ ಮೆದುಳಿನ ತೀವ್ರ ಹಾನಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ.

ಕುಂದಿ ಬಂಧನವನ್ನು ಹಿಂಸಾತ್ಮಕವಾಗಿ ವಿರೋಧಿಸಿದರು ಮತ್ತು ಮದ್ಯದ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ‘ಪತಿಯು ಕುಡಿದು ಜೋರಾಗಿ ಮಾತನಾಡುತ್ತಿದ್ದರು. ಆದರೆ, ಹಿಂಸಾತ್ಮಕವಾಗಿ ನಡೆದುಕೊಂಡಿರಲಿಲ್ಲ’ ಎಂದು ಪತ್ನಿ ಅಮೃತಪಾಲ್‌ ಕೌರ್‌ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.