ಹಣ
ಕೊಲಂಬೊ: ಶ್ರೀಲಂಕಾದ ಪೂರ್ವ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಭಾರತ ₹230.71 ಕೋಟಿ ನೆರವು ನೀಡುತ್ತಿದೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಶ್ರೀಲಂಕಾ ಆರೋಗ್ಯ ಸಚಿವ ಹಾಗೂ ವಕ್ತಾರ ನಳಂದಾ ಜಯಥಿಸ್ಸಾ ಅವರು ಈ ವಿಷಯ ತಿಳಿಸಿದರು.
ನಮ್ಮ ಕೋರಿಕೆಯ ಮೇರೆಗಿನ ಭಾರತ್ ಸರ್ಕಾರದ ಪ್ರಸ್ತಾವಗಳಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿ ಸಹಿ ಹಾಕಿದೆ. ಇದು ಉಭಯ ರಾಷ್ಟ್ರಗಳ ರಾಜಕೀಯ–ಆರ್ಥಿಕ ಸಹಕಾರ ಬಲ ವೃದ್ಧಿಗೆ ಅನುಕೂಲ ಆಗಲಿದೆ ಎಂದು ಅವರು ವಿವರಿಸಿದರು.
₹230.71 ಕೋಟಿಯಲ್ಲಿ ₹30.15 ಕೋಟಿ ಶಿಕ್ಷಣಕ್ಕೆ ₹70.80 ಕೋಟಿ ಆರೋಗ್ಯಕ್ಕೆ ಮತ್ತು ₹60.20 ಕೋಟಿಯನ್ನು ಕೃಷಿ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಇದರಿಂದ ಸ್ಥಳೀಯರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಲಿ. ಇದಕ್ಕಾಗಿ ನಾವು ಭಾರತ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
2023ರ ಆರಂಭದಲ್ಲಿ ಶ್ರೀಲಂಕಾ ರಾಜಕೀಯ ಅಸ್ಥಿರತೆಯಿಂದ ಆರ್ಥಿಕ ದಿವಾಳಿತನವನ್ನು ಎದುರಿಸಿತ್ತು. ಹೀಗಾಗಿ ಭಾರತ, ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡಲು ಮುಂದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.