ADVERTISEMENT

ಭಾರತ–ಅಮೆರಿಕ ಬಾಂಧವ್ಯವು ವಿರೋಧಿಗಳಿಗೆ ಎಚ್ಚರಿಕೆಯ ಗಂಟೆ: ಅಮೆರಿಕದ ಸೆನೆಟರ್‌

ಪಿಟಿಐ
Published 30 ಅಕ್ಟೋಬರ್ 2020, 9:49 IST
Last Updated 30 ಅಕ್ಟೋಬರ್ 2020, 9:49 IST
ಕೆವಿನ್‌ ಕ್ರೇಮರ್‌
ಕೆವಿನ್‌ ಕ್ರೇಮರ್‌   

ವಾಷಿಂಗ್ಟನ್‌: ‘ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ರಷ್ಯಾ ಮತ್ತು ಚೀನಾದಂತಹ ವಿರೋಧಿ ರಾಷ್ಟ್ರಗಳಿಗೆ ಕಠಿಣ ಸಂದೇಶ ರವಾನಿಸಲಾಗಿದೆ’ ಎಂದು ಅಮೆರಿಕದ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷದ ಪ್ರಭಾವಿ ಸೆನೆಟರ್ಕೆವಿನ್‌ ಕ್ರೇಮರ್ ತಿಳಿಸಿದ್ದಾರೆ.

ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ನಡುವೆ ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ2+2 (ಎರಡೂ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರ) ಸಭೆ ಆಯೋಜಿಸಲಾಗಿತ್ತು.

ಭಾರತದ ಸಾರ್ವಭೌಮತೆಗೆ ಎದುರಾಗುವ ಯಾವುದೇ ಬೆದರಿಕೆಯನ್ನು ಎದುರಿಸಲು ನೆರವಾಗುವುದಾಗಿ ಈ ಸಭೆಯ ವೇಳೆ ಅಮೆರಿಕ ಭರವಸೆ ನೀಡಿತ್ತು. ಮೂಲಭೂತ ವಿನಿಮಯ ಮತ್ತು ಸಹಕಾರ ಒಪ್ಪಂದಕ್ಕೂ (ಬಿಎಸಿಎ) ಈ ವೇಳೆ ಸಹಿ ಹಾಕಲಾಗಿತ್ತು.

ADVERTISEMENT

‘ಅಮೆರಿಕ ಮತ್ತು ಭಾರತ ನಡುವಣ ಬಾಂಧವ್ಯ ವೃದ್ಧಿಯು ಉಭಯ ದೇಶಗಳನ್ನು ಸುರಕ್ಷಿತವಾಗಿರಿಸುತ್ತದೆ. ಆರ್ಥಿಕತೆಯ ಬಲವೃದ್ಧಿಗೂ ಇದು ಸಹಕಾರಿಯಾಗಲಿದೆ ’ ಎಂದು ಸೆನೆಟರ್‌ ಕೆವಿನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.