ADVERTISEMENT

ಕೋವ್ಯಾಕ್ಸ್‌ ಕಾರ್ಯಕ್ರಮದಡಿ ಭಾರತಕ್ಕೂ ಲಸಿಕೆ ಹಂಚಿಕೆ: ಅಮೆರಿಕ

ಪಿಟಿಐ
Published 10 ಜೂನ್ 2021, 6:24 IST
Last Updated 10 ಜೂನ್ 2021, 6:24 IST
   

ವಾಷಿಂಗ್ಟನ್‌: ‘ಅಮೆರಿಕ ಬೆಂಬಲಿತ ‘ಕೋವ್ಯಾಕ್ಸ್‌’ ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದಡಿ ಬಳಕೆಯಾಗದ 8 ಕೋಟಿ ಡೋಸ್‌ ಲಸಿಕೆಗಳಲ್ಲಿ ಭಾರತಕ್ಕೂ ಲಸಿಕೆ ಹಂಚಿಕೆ ಮಾಡಲಾಗುವುದು’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೋವಾಕ್ಸ್‌ ಕಾರ್ಯಕ್ರಮದಡಿ 2.5 ಕೋಟಿ ಬಳಕೆಯಾಗದ ಡೋಸ್‌ಗಳ ಪೈಕಿ ಮೊದಲ ಹಂತದಲ್ಲಿ ಶೇಕಡ 75ರಷ್ಟು ಅಂದರೆ 1.9 ಕೋಟಿ ಡೋಸ್‌ ಲಸಿಕೆಯನ್ನು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮತ್ತು ಆಫ್ರಿಕಾಗೆ ಹಂಚಿಕೆ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಜೂನ್‌ 2 ರಂದು ಘೋಷಿಸಿದ್ದರು.

‘ಜಾಗತಿಕವಾಗಿ ಹಂಚಲಾಗುವ 8 ಕೋಟಿ ಡೋಸ್‌ ಲಸಿಕೆಗಳಲ್ಲಿ ಭಾರತಕ್ಕೂ ಪಾಲನ್ನು ನೀಡಲಾಗುವುದು. ಇದರಲ್ಲಿ ಬಹುಶಃ 60 ಲಕ್ಷ ಡೋಸ್‌ಗಳನ್ನು ಭಾರತಕ್ಕೆ ಹಂಚಿಕೆ ಮಾಡುವ ಸಾಧ್ಯತೆ ಇದೆ. ಆದರೆ ಇದು ಯಾವಾಗ ಭಾರತಕ್ಕೆ ತಲುಪಲಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಅವರು ಸುದ್ಧಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

ADVERTISEMENT

‘ಭಾರತವು ಕೋವಿಡ್‌ ಎರಡನೇ ಅಲೆಯಿಂದಾಗಿ ತತ್ತರಿಸಿದೆ. ನಾವು ಈ ಮೊದಲೇ ಲಸಿಕೆಯನ್ನು ಹಂಚಿಕೆ ಮಾಡಬೇಕು ಎಂದುಕೊಂಡಿದ್ದೆವು. ಸಾಂಕ್ರಾಮಿಕದ ಸಮಯದಲ್ಲಿ ಭಾರತಕ್ಕೆ ನೆರವಾಗುವ ಮೂಲಕ ನಾವು ಪಾಲುದಾರಿಕೆಯನ್ನು ನಿಭಾಯಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.