ADVERTISEMENT

ಅಮೆರಿಕದ ಜನಪ್ರತಿನಿಧಿಗಳ ಸಭೆ: ಪರಿಮಳಾ ಅಧ್ಯಕ್ಷೆ

ಪಿಟಿಐ
Published 5 ಜೂನ್ 2019, 19:03 IST
Last Updated 5 ಜೂನ್ 2019, 19:03 IST
   

ವಾಷಿಂಗ್ಟನ್‌ (ಪಿಟಿಐ): ಭಾರತೀಯ ಮೂಲದ ಅಮೆರಿಕದ ಸಂಸದೆ ಪರಿಮಳಾ ಜಯಪಾಲ್‌ ಅಮೆರಿಕ ಜನಪ್ರತಿನಿಧಿಗಳ ಸಭೆಯ ತಾತ್ಕಾಲಿಕ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದು, ಈ ಹುದ್ದೆ ಅಲಂಕರಿಸಿದ ದಕ್ಷಿಣ ಏಷ್ಯದ ಮೊದಲ ಅಮೆರಿಕನ್‌ ಮಹಿಳೆಯಾಗಿದ್ದಾರೆ.

53 ವರ್ಷದ ಪರಿಮಳಾ, ವಾಷಿಂಗ್ಟನ್‌ ಡಿಸಿಯ ಡೆಮಾಕ್ರಟಿಕ್‌ ಪಕ್ಷದ ಸದಸ್ಯೆ. ‘ಅಮೆರಿಕ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿದ ದಕ್ಷಿಣ ಏಷ್ಯದ ಮೊದಲ ಅಮೆರಿಕನ್‌ ಮಹಿಳೆ ನಾನು. ನಮ್ಮ ದೇಶದ ಇತಿಹಾಸದಲ್ಲಿ ಕಾಂಗ್ರೆಸ್‌ (ಸಂಸತ್‌) ವೈವಿಧ್ಯತೆ ಹೊಂದಿದ್ದು, ಈ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂದು ಟ್ವಿಟ್ಟರ್‌ನಲ್ಲಿ ಪರಿಮಳಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT