ADVERTISEMENT

ಭಾರತೀಯ ಅಮೆರಿಕನ್‌ ವೈದ್ಯರಿಂದ ₹37 ಕೋಟಿ ಕೋವಿಡ್‌ ಪರಿಹಾರ ನಿಧಿ ಸಂಗ್ರಹ

ಪಿಟಿಐ
Published 4 ಆಗಸ್ಟ್ 2021, 7:49 IST
Last Updated 4 ಆಗಸ್ಟ್ 2021, 7:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌:‘ಭಾರತೀಯ ಅಮೆರಿಕನ್‌ ವೈದ್ಯರು ಭಾರತಕ್ಕಾಗಿ ₹37.05 ಕೋಟಿ ಕೋವಿಡ್‌ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ’ ಎಂದು ಭಾರತೀಯ ಮೂಲದ ವೈದ್ಯರ ಸಂಘಟನೆಯು ತಿಳಿಸಿದೆ.

‘ಈ ಹಣವನ್ನು ಭಾರತದ 45 ಆಸ್ಪತ್ರೆಗಳಿಗೆ 2,300 ಆಮ್ಲಜನಕ ಸಾಂದ್ರಕಗಳು, ತಲಾ 100 ವೆಂಟಿಲೇಟರ್‌ಗಳು ಮತ್ತು ನಸಲ್‌ ಕ್ಯಾನುಲಾ ಉಪಕರಣವನ್ನು ಒದಗಿಸಲು ಒಳಸಲಾಗಿದೆ ಎಂದು ಅಮೆರಿಕನ್‌ ಅಸೋಸಿಯೇಷನ್‌ ಫಾರ್‌ ಫಿಸಿಷಿಯನ್ಸ್‌ ಆಫ್‌ ಇಂಡಿಯನ್‌ ಒರಿಜಿನ್‌’(ಎಎಪಿಐ) ಮಂಗಳವಾರ ಹೇಳಿದೆ.

‘ಎಎಪಿಐ ಮತ್ತು ಭಾರತೀಯ ಸಮುದಾಯದ ಸದಸ್ಯರ ಉದಾರತೆಯು ಅಭೂತಪೂರ್ವವಾಗಿದೆ’ ಎಂದು ಎಎಪಿಐ ಅಧ್ಯಕ್ಷೆ ಡಾ.ಅನುಪಮಾ ಗೋತಿಮುಕುಲಾ ಹೇಳಿದರು.

ADVERTISEMENT

‘ಭಾರತದಲ್ಲಿ ಆಗಸ್ಟ್‌ ಅಂತ್ಯದ ವೇಳೆಗೆ ಮೂರನೇ ಅಲೆ ಬರುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ. ಹಾಗಾಗಿ ಎಎಪಿಐಯು ಭಾರತದ ಗ್ರಾಮೀಣ ಪ್ರದೇಶಗಳಿಗೆ ನೆರವು ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮತ್ತು ಹಲವು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ’ ಎಂದು ಸಂಘಟನೆ ತಿಳಿಸಿದೆ.

‘ಮೂರನೇ ಅಲೆಗಾಗಿ ಸಿದ್ಧತೆ ನಡೆಸಲು ಉಳಿದ ನಿಧಿಯನ್ನು ಬಳಸಲಾಗುವುದು’ ಎಂದು ಎಎಪಿಐನ ಉಪಾಧ್ಯಕ್ಷೆ ಡಾ. ಅಂಜನಾ ಸಮೇದರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.