ADVERTISEMENT

ಡೆಮಾಕ್ರಾಟಿಕ್ ಪಕ್ಷ ಸಮಾವೇಶಕ್ಕೆ ಭಾರತ ಮೂಲದ ಉದ್ಯಮಿ ಭುಟೊರಿಯ ಅವರಿಗೆ ಆಹ್ವಾನ

ಪಿಟಿಐ
Published 13 ಜೂನ್ 2020, 7:35 IST
Last Updated 13 ಜೂನ್ 2020, 7:35 IST

ವಾಷಿಂಗ್ಟನ್: ಸಿಲಿಕಾನ್‌ ವ್ಯಾಲಿಯ ಉದ್ಯಮಿ, ಭಾರತೀಯ ಸಂಜಾತ ಅಜಯ್‌ ಜೈನ್‌ ಭುಟೊರಿಯಾಅವರನ್ನು ಆಗಸ್ಟ್‌ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡೆನ್‌ ಅವರ ಡೆಮಾಕ್ರಾಟಿಕ್‌ ಪಕ್ಷದ ರಾಷ್ಟ್ರೀಯ ಸಮಾವೇಶಕ್ಕೆ ಅತಿಥಿಯಾಗಿ ಆಹ್ವಾನಿಸಲಾಗಿದೆ.

ಉದ್ದೇಶಿತ ಸಮಾವೇಶದಲ್ಲಿ 77 ವರ್ಷದ ಬಿಡೆನ್‌ ಅವರನ್ನು ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಲಾಗುತ್ತದೆ.

ಚುನಾವಣೆಯಲ್ಲಿ ಪುನರಾಯ್ಕೆ ಬಯಸಿರುವ ಹಾಲಿ ಅಧ್ಯಕ್ಷ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಬಿಡೆನ್‌ ಪ್ರತಿಸ್ಪರ್ಧಿಯಾಗಲಿದ್ದಾರೆ.

ADVERTISEMENT

ಕ್ಯಾಲಿಫೋರ್ನಿಯಾ ಡಿಸ್ಟ್ರಿಕ್ಟ್‌ನ 17ನೇ ರಾಷ್ಟ್ರೀಯ ಸಮಾವೇಶದ ಜಿಲ್ಲಾ ಹಂತದ ಸಭೆಯಲ್ಲಿ ಆನ್‌ಲೈನ್‌ ಮತದಾನದ ಮೂಲಕ ಇವರು ಬಿಡೆನ್‌ನ ಅವರ ಅತಿಥಿಯಾಗಿ ಆಯ್ಕೆಯಾದರು.

ಭುಟೊರಿಯಾ ಅವರು ಬಿಡೆನ್‌ ಅವರ ಬೆಂಬಲಿಗರಾಗಿದ್ದು, ಏಷ್ಯಾ ಅಮೆರಿಕರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.