ADVERTISEMENT

ನಾಸಾದ ಮುಖ್ಯ ತಾಂತ್ರಿಕ ತಜ್ಞರಾಗಿ ಭಾರತ ಮೂಲದ ಚರಣಿಯಾ ನೇಮಕ

ಪಿಟಿಐ
Published 10 ಜನವರಿ 2023, 11:15 IST
Last Updated 10 ಜನವರಿ 2023, 11:15 IST
ಎ.ಸಿ. ಚರಣಿಯಾ
ಎ.ಸಿ. ಚರಣಿಯಾ   

ವಾಷಿಂಗ್ಟನ್ (ಪಿಟಿಐ): ಭಾರತೀಯ ಮೂಲದ ಅಮೆರಿಕ ಬಾಹ್ಯಾಕಾಶ ಕೈಗಾರಿಕಾ ತಜ್ಞ ಎ.ಸಿ. ಚರಣಿಯಾ ಅವರನ್ನು ನಾಸಾದ ಮುಖ್ಯ ತಾಂತ್ರಿಕ ತಜ್ಞರಾಗಿ ನೇಮಕ ಮಾಡಲಾಗಿದೆ.

ಇವರು ನಾಸಾ ಮುಖ್ಯ ಕಚೇರಿಯಲ್ಲಿ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅವರಿಗೆ ತಾಂತ್ರಿಕ ನೀತಿ ಮತ್ತು ಕಾರ್ಯಕ್ರಮಗಳಿಗೆ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ.

‘ನಾಸಾ ಯೋಜನೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಚರಣಿಯಾ ಅವರು ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ನಿಭಾಯಿಸುವ ಪರಿಣತಿ ಹೊಂದಿರುವ ಅನುಭವಿ ನಾಯಕ’ ಎಂದು ನಾಸಾದ ತಂತ್ರಜ್ಞಾನ, ನೀತಿ ಮತ್ತು ಕಾರ್ಯತಂತ್ರ ಕುರಿತ ಸಹ ವ್ಯವಸ್ಥಾಪಕಿ ಭವ್ಯ ಲಾಲ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.