
ಪಿಟಿಐ
ಕೊಲಂಬೊ: ಹೆರಾಯಿನ್ ಸಾಗಿಸುತ್ತಿದ್ದ ಭಾರತೀಯರೊಬ್ಬರನ್ನು ಶ್ರೀಲಂಕಾದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಕ್ವಾಲಾಲಂಪುರದಿಂದ ಭಾನುವಾರ ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಭಾರತೀಯನ(32) ಬಳಿ ಇದ್ದ 2.8 ಕೆ.ಜಿ ಹೆರಾಯಿನ್ ಅನ್ನು ಮಾದಕವಸ್ತು ನಿಗ್ರಹ ವಿಭಾಗ ವಶಪಡಿಸಿಕೊಂಡಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ವಶಪಡಿಸಿಕೊಂಡಿರುವ ಹೆರಾಯಿನ್‌ನ ಒಟ್ಟು ಮೌಲ್ಯ ₹99 ಲಕ್ಷ(3.4 ಕೋಟಿ ಶ್ರೀಲಂಕಾ ರೂಪಾಯಿ) ಎಂದು ಅಂದಾಜಿಸಲಾಗಿದೆ ಎಂಬುದಾಗಿ ‘ಅಡಾ ಡೆರಾನ’ ವೆಬ್‌ಸೈಟ್ ವರದಿ ಮಾಡಿದೆ.
ಬಂಧಿತ ವ್ಯಕ್ತಿಯು ತಾವು ತಂದಿದ್ದ ಹೆರಾಯಿನ್ ಅನ್ನು ಕೊಲಂಬೊದ ಸ್ಥಳೀಯ ಡ್ರಗ್ ಡೀಲರ್‌ಗೆ ತಲುಪಿಸುವ ಯೋಜನೆ ರೂಪಿಸಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಬಂಧಿತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.