ಲಾಹೋರ್: ಉದ್ಯಮಿ ಸಜ್ಜನ್ ಜಿಂದಾಲ್ ಅವರು, ಲಾಹೋರ್‌ನಲ್ಲಿ ಜರುಗಿದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮೊಮ್ಮಗನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಷರೀಫ್ ಮೊಮ್ಮಗ ಝೈದ್ ಹುಸೇನ್ ನವಾಜ್ ಅವರ ವಿವಾಹ ಕಾರ್ಯಕ್ರಮವು, ಲಾಹೋರ್‌ನಲ್ಲಿನ ತಮ್ಮ ಒಡೆತನದ ಭವ್ಯ ಬಂಗಲೆಯಲ್ಲಿ ಕಳೆದ ಭಾನುವಾರ ಜರುಗಿದೆ. ಜೆಎಸ್‌ಡಬ್ಲ್ಯು ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಜ್ಜನ್ ಅವರು, ತಮ್ಮ ಕುಟುಂಬದವರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಪಾಕಿಸ್ತಾನದ ಆಡಳಿತಾರೂಢ ಪಿಎಂಎಲ್‌ಎನ್ ತಿಳಿಸಿದೆ.
ಜಿಂದಾಲ್ ಕುಟುಂಬವು ಷರೀಫ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಸಜ್ಜನ್ ಅವರು ಮುಂಬೈನಿಂದ ಖಾಸಗಿ ವಿಮಾನದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ಅದು ಹೇಳಿದೆ.
ಷರೀಫ್ ಅವರ ಮಗ ಹುಸೇನ್ ನವಾಜ್ ಅವರು ಕೊಲ್ಲಿ ರಾಷ್ಟ್ರವೊಂದರಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಿದ್ದು, ಇದಕ್ಕೆ ಜಿಂದಾಲ್ ಕುಟುಂಬ ನೆರವು ನೀಡಿದೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.