ADVERTISEMENT

ಸಿಂಗಪುರ: ಲೈಂಗಿಕ ಕಿರುಕುಳ ನೀಡಿದ ಭಾರತ ಮೂಲದ ವ್ಯಕ್ತಿಗೆ ಶಿಕ್ಷೆ

ಪಿಟಿಐ
Published 24 ಜೂನ್ 2023, 16:02 IST
Last Updated 24 ಜೂನ್ 2023, 16:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿಂಗಪುರ: ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಭಾರತ ಮೂಲದ ಬಾಣಸಿಗ ಸುಶೀಲ್‌ ಕುಮಾರ್‌ಗೆ (44) ನಾಲ್ಕು ತಿಂಗಳ ಕಾಲ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಸಿಂಗಪುರದ ‘ಟುಡೆ’ ಸುದ್ದಿ ಪತ್ರಿಕೆ ಶುಕ್ರವಾರ ವರದಿ ಮಾಡಿದೆ. 

ಸಬ್‌ವೇಯೊಂದರ ರೈಲು ನಿಲ್ದಾಣದಲ್ಲಿ 14 ವರ್ಷ ವಯಸ್ಸಿನ ಅಪರಿಚಿತ ಬಾಲಕಿಯೊಬ್ಬಳನ್ನು ಅಡ್ಡಗಟ್ಟಿ ಸುಶೀಲ್‌ ಕಿರುಕುಳ ನೀಡಿದ್ದ. ಈ ಪ್ರಕರಣ ನಡೆದು ಮೂರು ತಿಂಗಳ ಬಳಿಕ 19 ವರ್ಷ ವಯಸ್ಸಿನ ಮತ್ತೊಬ್ಬ ಯುವತಿಗೆ ಕಿರುಕುಳ ನೀಡಿದ್ದಾನೆ.

ಎರಡೂ ಪ್ರಕರಣಗಳಲ್ಲಿ ಸುಶೀಲ್‌ ಸಂತ್ರಸ್ತೆಯರನ್ನು ದೀರ್ಘಕಾಲದವರೆಗೆ ತಬ್ಬಿಕೊಂಡಿದ್ದಾನೆ ಮತ್ತು ಚುಂಬಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೊದಲ ಪ್ರಕರಣ ನಡೆದಿರುವುದು ಕಳೆದ ವರ್ಷ ಆಗಸ್ಟ್‌ 2ರಂದು. ಸುಶೀಲ್‌ ಕಿರುಕುಳ ನೀಡಿದ್ದ ದಿನದಂದೇ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ವಸತಿ ಸಮುಚ್ಚಯದ ಲಿಫ್ಟ್‌ ಒಂದರಲ್ಲಿ ಯುವತಿಗೆ ಕಿರುಕುಳ ನೀಡಿದ್ದಾನೆ.

ನವೆಂಬರ್‌ 8ರಂದು ಸುಶೀಲ್‌ನನ್ನು ಬಂಧಸಲಾಯಿತು ಮತ್ತು ಲಿಫ್ಟ್‌ನಲ್ಲಿ ಯುವತಿಗೆ ನೀಡಿದ ಕಿರುಕುಳದ ವಿಡಿಯೊವನ್ನು ಪೊಲೀಸರು ವಶಕ್ಕೆ ಪಡೆದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.