ADVERTISEMENT

ಲೈಂಗಿಕತೆ ಪ್ರಚೋದಿಸುವ ಔಷಧ: ಭಾರತೀಯ ವೈದ್ಯನ ವಿರುದ್ಧ ಅಮೆರಿಕದಲ್ಲಿ ದೋಷಾರೋಪ

ಪಿಟಿಐ
Published 20 ಜುಲೈ 2025, 16:16 IST
Last Updated 20 ಜುಲೈ 2025, 16:16 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ನ್ಯೂಯಾರ್ಕ್‌: ಕಾನೂನು ಸಮ್ಮತ ವೈದ್ಯಕೀಯ ಉದ್ದೇಶವಿಲ್ಲದೆ, ಲೈಂಗಿಕತೆ ಪ್ರಚೋದಿಸುವ ಔಷಧಿಗಳನ್ನು ರೋಗಿಗಳಿಗೆ ಶಿಫಾರಸು ಮಾಡಿದ್ದಾರೆ ಎಂದು ಭಾರತೀಯ ಸಂಜಾತ ವೈದ್ಯರೊಬ್ಬರ ವಿರುದ್ಧ ಅಮೆರಿಕದ ಅಟಾರ್ನಿ ಕಚೇರಿ ದೋಷಾರೋಪ ಹೊರಿಸಿದೆ.

ಸೆಕಾಕ್ಸ್‌ನ ರಿತೇಶ್‌ ಕಲ್ರಾ (51) ವಿರುದ್ಧ ಈ ದೋಷಾರೋಪ ಹೊರಿಸಲಾಗಿದೆ.

ADVERTISEMENT

ರಿತೇಶ್‌ ತಮ್ಮ ಕ್ಲಿನಿಕ್‌ನಲ್ಲಿ ಆಕ್ಸಿಕೋಡೋನ್‌ ಒಳಗೊಂಡ ಒಪಿಯಾಡ್ಸ್‌ ಹಾಗೂ ಕೊಡೈನ್‌ನೊಂದಿಗೆ ಪ್ರೊಮೆಥಾಜಿನ್‌ ಹೊಂದಿದ್ದ ಹೈಡೋಸ್‌ ಮಾತ್ರೆಗಳನ್ನು ಶಿಫಾರಸು ಮಾಡುತ್ತಿದ್ದರು ಎಂದು ನ್ಯೂಜೆರ್ಸಿಯ ಅಟಾರ್ನಿ ಕಚೇರಿ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ದುರ್ಬಲ ಮನೋಭಾವದ ರೋಗಿಗಳನ್ನು ಲೈಂಗಿಕ ತೃಷೆಗೆ ಬಳಸಿಕೊಳ್ಳಲಿಕ್ಕಾಗಿಯೇ ತಮ್ಮ ಜವಾಬ್ದಾರಿಯುತ ಸ್ಥಾನವನ್ನು ವೈದ್ಯ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ವಕೀಲರಾದ ಅಲೀನಾ ಹಬ್ಬಾ ತಿಳಿಸಿದ್ದಾರೆ.

ಆಕ್ಸಿಕೋಡೋನ್‌ ಮಾತ್ರೆಗಳನ್ನು 31 ಸಾವಿರ ಬಾರಿ ವೈದ್ಯರ ಚೀಟಿಯಲ್ಲಿ ಕಲ್ರಾ ಅವರು ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನ್ಯೂಯಾರ್ಕ್‌ನ ಫೆಡರಲ್‌ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರ ಮುಂದೆ ಗುರುವಾರ ಹಾಜರಾದ ರಿತೀಶ್‌ ಅವರನ್ನು ಗೃಹಬಂಧನಕ್ಕೊಳಪಡಿಸಿ, 1 ಲಕ್ಷ ಡಾಲರ್ ಮೌಲ್ಯದ ಬಾಂಡ್‌ ಮೇಲೆ ಬಿಡುಗಡೆ ಮಾಡಲಾಯಿತು. ಪ್ರಕರಣ ಮುಗಿಯುವ ತನಕವೂ ವೈದ್ಯಕೀಯ ಅಭ್ಯಾಸ ನಡೆಸದಂತೆ ಸೂಚಿಸಿದೆ.

ಕಲ್ರಾ ಪರ ವಕೀಲರು ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು ನ್ಯೂಯಾರ್ಕ್‌ ಡೈಲಿ ನ್ಯೂಸ್‌ ಶನಿವಾರ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.