ADVERTISEMENT

‘ವಸ್ತು ಪ್ರದರ್ಶನ: ಸಾಂಸ್ಕೃತಿಕ ವೈವಿಧ್ಯತೆಯ ಪ್ರತೀಕ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 15:52 IST
Last Updated 27 ಜನವರಿ 2024, 15:52 IST
.
.   

ಸಿಂಗಪುರ: ಇಲ್ಲಿ ನಡೆದ ‘ನಮಸ್ತೆ ಭಾರತ’ ವಸ್ತು ಪ್ರದರ್ಶನವು ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಪ್ರತೀಕದಂತೆ ಇದೆ ಎಂದು ಸಿಂಗಪುರದ ಭಾರತ ಹೈಕಮಿಷನರ್‌ ಡಾ.ಶಿಲ್ಪಕ್‌ ಅಂಬುಲೆ ಶ್ಲಾಘಿಸಿದರು.

ನಾಲ್ಕು ದಿನಗಳ ಕಾಲ ನಡೆಯುವ ವಸ್ತುಪ್ರದರ್ಶನಕ್ಕೆ ಅಂಬುಲೆ ಅವರು ಶುಕ್ರವಾರ ಚಾಲನೆ ನೀಡಿದರು. ಇಲ್ಲಿನ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ‘ಭಾರತದ ಮನಮೋಹಕ, ಅಮೂಲ್ಯ ವಸ್ತುಗಳನ್ನು ‘ಒಂದು ಜಿಲ್ಲೆ, ಒಂದು ವಸ್ತು’ ಪರಿಕಲ್ಪನೆಯಡಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

‘ಭಾರತದಲ್ಲೇ ತಯಾರಾದ ವೈವಿಧ್ಯಮಯ ವಸ್ತುಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಪ್ರದರ್ಶನದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸಿರುವುದಕ್ಕೆ ನಾವು ಹೆಮ್ಮೆ ಪಡಬೇಕು. ಸಿಂಗಪುರದಲ್ಲಿರುವ ಭಾರತ ಸಂಜಾತರು ಭಾರತದ ಸಂಸ್ಕೃತಿ ಮತ್ತು ವಸ್ತುಗಳನ್ನು ಉತ್ತೇಜಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.